ಸಿಡ್ನಿ:ಪೇಸ್ ಬೌಲರ್ ಕೇನ್ ರಿಚರ್ಡ್ಸನ್ ತಮ್ಮ ಮಗನೊಂದಿಗೆ ಸಮಯ ಕಳೆಯಲು ಭಾರತ ವಿರುದ್ಧದ ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದೆ ಸರಿದಿದ್ದಾರೆ ಮತ್ತು ಆಂಡ್ರ್ಯೂ ಟೈ ಅವರ ಸ್ಥಾನದಲ್ಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬುಧವಾರ ತಿಳಿಸಿದೆ.
ರಿಚರ್ಡ್ ಸನ್ ತನ್ನ ಪತ್ನಿ ಮತ್ತು ಇತ್ತೀಚೆಗೆ ಜನಿಸಿದ ಮಗುವಿಗೆ ಸಮಯ ನೀಡಲು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರಂತೆ. ಆಸ್ಟ್ರೇಲಿಯಾ ಕ್ರಿಕೆಟ್ ಕೂಡ ರಿಚರ್ಡ್ಸನ್ ಅವರ ನಿರ್ಧಾರ ಗೌರವಿಸಿದ್ದು, ಅವರ ಬದಲಿಗೆ ತಂಡದಲ್ಲಿ ವೇಗದ ಬೌಲರ್ ಆಂಡ್ರ್ಯೂ ಟೈ ಅವರನ್ನು ಸೇರ್ಪಡೆ ಮಾಡಿಕೊಂಡಿದೆ.