ಕರ್ನಾಟಕ

karnataka

ETV Bharat / sports

ರಾಹುಲ್​ ತ್ರಿಪಾಠಿ 81: ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡವನ್ನು 167 ಕ್ಕೆ ಆಲೌಟ್ ಮಾಡಿದ ಸಿಎಸ್​ಕೆ - ಚೆನ್ನೈ ಸೂಪರ್ ಕಿಂಗ್ಸ್ ಸ್ಕ್ವಾಡ್​

ಆರಂಭಿಕನಾಗಿ ಕಣಕ್ಕಿಳಿದು 18ನೇ ಓವರ್​ವರೆಗೆ ಬ್ಯಾಟಿಂಗ್​ ಮಾಡಿದ ತ್ರಿಪಾಠಿ 51 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ 81 ರನ್​ಗಳಿಸಿ ಡಿಜೆ ಬ್ರಾವೋಗೆ ವಿಕೆಟ್​ ಒಪ್ಪಿಸಿದರು.

ರಾಹುಲ್​ ತ್ರಿಪಾಠಿ 81
ರಾಹುಲ್​ ತ್ರಿಪಾಠಿ 81

By

Published : Oct 7, 2020, 9:37 PM IST

ಅಬುಧಾಬಿ: ರಾಹುಲ್ ತ್ರಿಪಾಠಿ ಅವರ ಆಕರ್ಷಕ ಅರ್ಧಶತಕ(81)ದ ನೆರವಿನಿಂದ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ಸಿಎಸ್​ಕೆ ವಿರುದ್ಧ 167 ರನ್​ಗಳಿಸಿದೆ.

ಟಾಸ್​ಗೆದ್ದ ಕೆಕೆಆರ್ ತಂಡದ ನಾಯಕ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಕಳೆದ ಪಂದ್ಯದಲ್ಲಿ 8ನೇ ಕ್ರಮಾಂಕದಲ್ಲಿ ಆಡಿದ್ದ ರಾಹುಲ್ ತ್ರಿಪಾಠಿ ಇಂದಿನ ಪಂದ್ಯದಲ್ಲಿ ನರೈನ್​ ಬದಲಾಗಿ ಆರಂಭಿಕನಾಗಿ ಕಣಕ್ಕಿಳಿದು ಆಕರ್ಷಕ ಅರ್ಧಶತಕ ಸಿಡಿಸಿದರು. ಅವರು ಗಿಲ್ ಜೊತೆಗೆ ಮೊದಲ ವಿಕೆಟ್​ ಜೊತೆಯಾಟದಲ್ಲಿ 37 ರನ್​ ಕಲೆಯಾಕಿದರು. ಗಿಲ್​ ಕೇವಲ 11 ರನ್​ಗಳಿಸಿ ಠಾಕೂರ್​ಗೆ ವಿಕೆಟ್​ ಒಪ್ಪಿಸಿದರು.

ನಂತರ ಬಂದಂತಹ ಯಾವ ಬ್ಯಾಟ್ಸ್​ಮನ್​ಗಳು ಕ್ರೀಸ್​ನಲ್ಲಿ ಹೆಚ್ಚು ನೆಲೆಯೂರಲು ಸಿಎಸ್​ಕೆ ಬೌಲರ್​ಗಳು ಅವಕಾಶ ನೀಡಲಿಲ್ಲ. ಗಿಲ್​ ನಂತರ ಬಂದ ನಿತೀಶ್ ರಾಣಾ 9, ನರೈನ್ 17, ಮಾರ್ಗನ್ 7, ರಸೆಲ್​ 2 ಹಾಗೂ ಕಾರ್ತಿಕ್​ ಕೇವಲ 12 , ಶಿವಮ್ ಮಾವಿ ಹಾಗೂ ನಾಗರಕೋಟಿ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಪ್ಯಾಟ್​ ಕಮ್ಮಿನ್ಸ್​ 9 ಎಸೆತಗಳಲ್ಲಿ 17 ರನ್​ಗಳಿಸಿ ಔಟಾಗದೆ ಉಳಿದರು.

ಆರಂಭಿಕನಾಗಿ ಕಣಕ್ಕಿಳಿದು 18ನೇ ಓವರ್​ವರೆಗೆ ಬ್ಯಾಟಿಂಗ್​ ಮಾಡಿದ ತ್ರಿಪಾಠಿ 51 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್​ ಸಹಿತ 81 ರನ್​ಗಳಿಸಿ ಡಿಜೆ ಬ್ರಾವೋಗೆ ವಿಕೆಟ್​ ಒಪ್ಪಿಸಿದರು.

ಸಿಎಸ್ಕೆ ಪರ ಡಿಜೆ ಬ್ರಾವೋ 37ಕ್ಕೆ3, ಕರ್ನ್ ಶರ್ಮಾ 25ಕ್ಕೆ 2, ಶಾರ್ದುಲ್ ಠಾಕೂರ್​ 28ಕ್ಕೆ 2 ಹಾಗೂ ಸ್ಯಾಮ್ ಕರ್ರನ್ 26ಕ್ಕೆ 2 ವಿಕೆಟ್​ ಪಡೆದು ಮಿಂಚಿದರು.​

ABOUT THE AUTHOR

...view details