ಕರ್ನಾಟಕ

karnataka

ETV Bharat / sports

ನಾನು ನಿಮ್ಮನ್ನು ಪ್ರತಿದಿನ ಮಿಸ್​ ಮಾಡಿಕೊಳ್ಳುತ್ತೇನೆ.. ಅಪ್ಪನನ್ನು ನೆನೆದು ಹಾರ್ದಿಕ್ ಭಾವುಕ - Krunal Pandya's father passes away

ಶನಿವಾರ ಬರೋಡ ತಂಡದ ನಾಯಕರಾಗಿದ್ದ ಹಾರ್ದಿಕ್ ಸಹೋದರ, ಕೃನಾಲ್ ಪಾಂಡ್ಯ ತಮ್ಮ ತಂದೆಯ ಸಾವಿನ ಸುದ್ದಿ ತಿಳಿದು, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಬಯೋಬಬಲ್​ನಿಂದ ಹೊರ ಬಂದಿದ್ದರು.

ಹಾರ್ದಿಕ್ ಪಾಂಡ್ಯ ತಂದೆ ನಿಧನ
ಹಾರ್ದಿಕ್ ಪಾಂಡ್ಯ ತಂದೆ ನಿಧನ

By

Published : Jan 17, 2021, 4:53 PM IST

ನವದೆಹಲಿ :ಭಾರತ ತಂಡದ ಆಲ್​ರೌಂಡರ್​ಗಳಾದ ಪಾಂಡ್ಯ ಸಹೋರರ ತಂದೆ ಶನಿವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ತಮ್ಮ ಟ್ವಿಟರ್‌ನಲ್ಲಿ ತಂದೆಯ ಬಗ್ಗೆ ಭಾವುಕವಾಗಿ ಬರೆದುಕೊಂಡಿರುವ ಅವರು, ತಮ್ಮ ತಂದೆಯನ್ನು ಪ್ರತಿದಿನ ಮಿಸ್​ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.

"ಅಪ್ಪ, ನಾನು ನಿನ್ನೆ ಹೇಳಿದಂತೆ, ಅದು ನಿಮ್ಮ ಕೊನೆಯ ಸವಾರಿಯಾಗಿದೆ. ನೀವು ನನ್ನ ರಾಜ, ನಿಮ್ಮ ಆತ್ಮಕ್ಕೆ ಶಾಂತಿಸಿಗಲಿ, ನಿಮ್ಮದು ಸಂತೋಷದ ಆತ್ಮ" ಎಂದು ತಮ್ಮ ಸಾಮಾಜಿಕ ಜಾಲಾತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ.

ಶನಿವಾರ ಬರೋಡ ತಂಡದ ನಾಯಕರಾಗಿದ್ದ ಹಾರ್ದಿಕ್ ಸಹೋದರ, ಕೃನಾಲ್ ಪಾಂಡ್ಯ ತಮ್ಮ ತಂದೆಯ ಸಾವಿನ ಸುದ್ದಿ ತಿಳಿದು, ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಬಯೋಬಬಲ್​ನಿಂದ ಹೊರ ಬಂದಿದ್ದರು.

ತಂಡದ ನಾಯಕರಾಗಿದ್ದ ಅವರು ಟೂರ್ನಿಯ ಮುಂದಿನ ಭಾಗವನ್ನು ತಪ್ಪಿಸಿಕೊಳ್ಳಲಿದ್ದಾರೆ. ಈ ವಿಚಾರವನ್ನು ಬರೋಡ ಕ್ರಿಕೆಟ್​ ಅಸೋಸಿಯೇಷನ್​ನ ಸಿಇಒ ಶಿಶಿರ್ ಹತ್ತಂಗಡಿ ತಿಳಿಸಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್​ಗಳ ಟೂರ್ನಿ ಮುಗಿಯುತ್ತಿದ್ದಂತೆ ತವರಿಗೆ ಮರಳಿರುವ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್​ ವಿರುದ್ಧದ ಸರಣಿಯ ತಯಾರಿಯಲ್ಲಿದ್ದಾರೆ.

ABOUT THE AUTHOR

...view details