ಕರ್ನಾಟಕ

karnataka

ಪಿಎಸ್​ಎಲ್ ಪಾಕಿಸ್ತಾನದಲ್ಲೇ ಮುಂದುವರಿಯುತ್ತದೆ: ಪ್ರಾಂಚೈಸಿಗಳ ಮನವಿ ತಿರಸ್ಕರಿದ ಪಿಸಿಬಿ

By

Published : Jul 14, 2020, 7:46 PM IST

ಮಾರ್ಚ್​ನಲ್ಲಿ ಟೂರ್ನಿ ನಡೆಯುತ್ತಿದ್ದಾಗಲೇ ಕೊರೊನಾ ಒಕ್ಕರಿಸಿದ್ದರಿಂದ ಟೂರ್ನಿಯನ್ನು ರದ್ದು ಮಾಡಲಾಗಿತ್ತು. ಇದೀಗ ಮುಚ್ಚಿ ಕ್ರೀಡಾಂಗಣದಲ್ಲಿ ನಡೆಸಬೇಕೆಂದುಕೊಂಡಿರುವ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಬೇಕೆಂದು ಪ್ರಾಂಚೈಸಿ ಮಾಲಿಕರು ಪಿಸಿಬಿಗೆ ಮನವಿ ಮಾಡಿಕೊಂಡಿದ್ದವು.

ಪಿಎಸ್​ಎಲ್ 2020
ಪಿಎಸ್​ಎಲ್ 2020

ಲಾಹೋರ್​:ಕೋವಿಡ್​ 19 ಭೀತಿಯಿಂದ ಅರ್ಧಕ್ಕೆ ನಿಂತಿರುವ ಪಾಕಿಸ್ತಾನ ಸೂಪರ್​ ಲೀಗ್​ ಅನ್ನು ಪಾಕಿಸ್ತಾನದಲ್ಲೇ ಮುಂದುವರಿಸುವುದಾಗಿ ಪಿಸಿಬಿ ಘೋಷಣೆ ಮಾಡಿದೆ.

ಮಾರ್ಚ್​ನಲ್ಲಿ ಟೂರ್ನಿ ನಡೆಯುತ್ತಿದ್ದಾಗಲೇ ಕೊರೊನಾ ಒಕ್ಕರಿಸಿದ್ದರಿಂದ ಟೂರ್ನಿಯನ್ನು ರದ್ದು ಮಾಡಲಾಗಿತ್ತು. ಇದೀಗ ಮುಚ್ಚಿ ಕ್ರೀಡಾಂಗಣದಲ್ಲಿ ನಡೆಸಬೇಕೆಂದುಕೊಂಡಿರುವ ಉಳಿದ ಪಂದ್ಯಗಳನ್ನು ಯುಎಇಯಲ್ಲಿ ಆಯೋಜಿಸಬೇಕೆಂದು ಪ್ರಾಂಚೈಸಿ ಮಾಲಿಕರು ಪಿಸಿಬಿಗೆ ಮನವಿ ಮಾಡಿಕೊಂಡಿದ್ದವು.

ಆದರೆ ಪ್ರಾಂಚೈಸಿಗಳ ಮನವಿಯನ್ನು ತಿರಸ್ಕರಿಸುವ ಪಾಕಿಸ್ತಾನ ಬೋರ್ಡ್​ ಉಳಿದಿರುವ ಪಂದ್ಯಗಳು ಪಾಕಿಸ್ತಾನದಲ್ಲೇ ನಡೆಯಲಿದೆ. 5 ಆವೃತ್ತಿಗಳಲ್ಲಿ ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಲೀಗ್​ಅನ್ನು ಇಲ್ಲೇ ಮುಗಿಸಬೇಕೆಂದು ತಿಳಿಸಿದೆ. ಇತ್ತೀಚಿನ ಸಭೆಯಲ್ಲಿ ಮುಂದಿನ ನವೆಂಬರ್​- ಡಿಸೆಂಬರ್​ನಲ್ಲಿ ಪಿಎಸ್ಎಲ್​ ಪೂರ್ಣಗೊಳಿಸಲಿ ತೀರ್ಮಾನಿಸಲಾಗಿದೆ.

ಕೊರೊನ ವೈರಸ್ ಸಾಂಕ್ರಾಮಿಕ ರೋಗವು ಮುಂದುವರಿದರೆ, ಟ್ರೋಫಿಯನ್ನು ಹಸ್ತಾಂತರಿಸಲು ಮತ್ತು ಬಹುಮಾನದ ಹಣವನ್ನು ವಿತರಿಸಲು ಕೆಲವು ಸೂತ್ರವನ್ನು ರಚಿಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಪಿಸಿಬಿ ಖಾಲಿ ಸ್ಟೇಡಿಯಂನಲ್ಲಿ ಮುಂದಿನ ಪಂದ್ಯಗಳನ್ನು ಆಯೋಜಹಿಸಿರುವುದರಿಂದ ಮುಂಗಡ ಟಿಕೆಟ್​ ಕಾಯ್ದಿರಿಸಿದ್ದವರಿಗೆ ಮರುಪಾವತಿಸುವ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದೆ.

ABOUT THE AUTHOR

...view details