ಕರ್ನಾಟಕ

karnataka

ETV Bharat / sports

ಆಸೀಸ್ ವಿರುದ್ಧ ಐತಿಹಾಸಿಕ ಗೆಲುವು: ಕೊಹ್ಲಿ, ರಹಾನೆ ಬಗ್ಗೆ ರವಿಶಾಸ್ತ್ರಿ ಮಾತು - ಭಾರತ vs ಆಸ್ಟ್ರೇಲಿಯಾ ಲೇಟೆಸ್ಟ್ ನ್ಯೂಸ್

ಸರಣಿಯನ್ನು ಗೆದ್ದ ನಂತರ ಭಾವುಕನಾಗಿದ್ದು, ಕಣ್ಣೀರು ಬರಲಾರಂಭಿಸಿತು ಎಂದು ರವಿಶಾಸ್ತ್ರಿ ಹೇಳಿದ್ದು, 36 ರನ್‌ಗಳಿಗೆ ಆಲೌಟ್​ ಆಗಿ ಹೀನಾಯ ಸೋಲುಕಂಡ ನಂತರ ಚಾಂಪಿಯನ್‌ಗಳಂತೆ ಆಡುವುದು ಅವಾಸ್ತವಿಕವಾಗಿದೆ ಎಂದಿದ್ದಾರೆ.

reason behind team's confidence is kohli says Ravi shastri
ಕೊಹ್ಲಿ ಮತ್ತು ರಹಾನೆ ಬಗ್ಗೆ ರವಿಶಾಸ್ತ್ರಿ ಮಾತು

By

Published : Jan 20, 2021, 12:23 PM IST

ಬ್ರಿಸ್ಬೇನ್:ಆಸ್ಟ್ರೇಲಿಯಾ ವಿರುದ್ಧದ 2-1 ಟೆಸ್ಟ್ ಸರಣಿಯನ್ನು ಗೆದ್ದ ನಂತರ, ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿಶಾಸ್ತ್ರಿ ಇದು ಭಾರತೀಯ ತಂಡದ ಈವರೆಗಿನ ಕಠಿಣ ಪ್ರವಾಸ ಎಂದು ಹೇಳಿದ್ದಾರೆ.

ತಂಡದಲ್ಲಿ ವಿಶ್ವಾಸ ಮೂಡಿಸಿದ ಕೀರ್ತಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಸಲ್ಲುತ್ತದೆ. ಅಡಿಲೇಡ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಸೋಲಿನ ನಂತರ ಕೊಹ್ಲಿ ತವರಿಗೆ ಮರಳಿದರು. ಅವರ ನಿರ್ಗಮನದ ನಂತರ, ಅಜಿಂಕ್ಯಾ ರಹಾನೆ ಟೀಂ ಇಂಡಿಯಾದ ನಾಯಕತ್ವ ವಹಿಸಿ ಭಾರತಕ್ಕೆ 2-1 ಸರಣಿ ಗೆಲುವು ನೀಡಿದರು. ಇದಕ್ಕೂ ಮುನ್ನ, 2018-19ರಲ್ಲಿ, ಕೊಹ್ಲಿ ನಾಯಕತ್ವದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 2-1 ರಿಂದ ಸೋಲಿಸಿತು.

ಸರಣಿ ಗೆದ್ದ ಟೀಂ ಇಂಡಿಯಾ ಆಟಗಾರರು

ನಾಲ್ಕನೇ ಟೆಸ್ಟ್ ಮುಗಿದ ನಂತರ ಮಾತನಾಡಿದ ರವಿಶಾಸ್ತ್ರಿ, "ಇದು ಇಲ್ಲಿಯವರೆಗಿನ ಕಠಿಣ ಪ್ರವಾಸವಾಗಿತ್ತು. ಅನೇಕ ಆಟಗಾರರಿಗೆ ಗಾಯವಾದರೂ, ನಾವು ಕೋವಿಡ್ ಮತ್ತು ಕ್ವಾರಂಟೈನ್‌ನಲ್ಲಿ ಸಮಯದಲ್ಲೂ ನಿಯಮದ ಮಧ್ಯೆಯೂ ಉತ್ತಮ ಪ್ರದರ್ಶನ ತೋರಿದ್ದೇವೆ ಎಂದಿದ್ದಾರೆ. ಅಲ್ಲದೇ ಈ ಫಲಿತಾಂಶಕ್ಕಾಗಿ ವಿರಾಟ್ ಕೊಹ್ಲಿಗೂ ಮನ್ನಣೆ ಕೊಡಬೇಕು, ಅವರು ಇಲ್ಲಿರಲಿಲ್ಲ, ತವರಿಗೆ ಮರಳಿದ್ದಾರೆ. ಆದರೂ ಕೊಹ್ಲಿ ಯಾವಾಗಲೂ ನಮ್ಮೊಂದಿಗಿದ್ದಾರೆ. ಕೊಹ್ಲಿಯ ಪಾತ್ರದ ತುಂಬಾ ಇದೆ ಎಂದು ಹೇಳಿದ್ದಾರೆ.

ಅಜಿಂಕ್ಯ ರಹಾನೆಯನ್ನು ಕೊಂಡಾಡಿದ ರವಿಶಾಸ್ತ್ರಿ, "ರಹಾನೆ, ಕೊಹ್ಲಿಯಂತೆ ಉತ್ತಮ ಕೆಲಸ ಮಾಡಿದ್ದಾರೆ. ಅಂತಿಮ ಟೆಸ್ಟ್​ಗೆ ನಮಗೆ ಯಾವುದೇ ಆಯ್ಕೆ ಉಳಿದಿರಲಿಲ್ಲ. ಭಾರತವು ಕಳೆದ ಬಾರಿ ಆಸ್ಟ್ರೇಲಿಯಾದಲ್ಲೇ ಅವರನ್ನು ಸೋಲಿಸಿತ್ತು ಆದರೆ, ಅಂದು ತಂಡದಲ್ಲಿದ್ದವರು ಈ ಅಂತಿಮ ಟೆಸ್ಟ್‌ನಲ್ಲಿ ಇರಲಿಲ್ಲ. ಆದ್ದರಿಂದ ಯುವ ಆಟಗಾರರ ಮೇಲೆ ವಿಶ್ವಾಸವಿಡುವುದು ಮುಖ್ಯವಾಗಿತ್ತು" ಎಂದಿದ್ದಾರೆ.

ರಹಾನೆ ಅವರ ನಾಯಕತ್ವವನ್ನು ಶ್ಲಾಘಿಸಿದ ಅವರು, "ರಹಾನೆ ಶಾಂತವಾಗಿರಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆಂದು ನಾನು ಭಾವಿಸುತ್ತೇನೆ. ಈ ಮೊದಲು ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಮಾತ್ರ ಆಡಿದ ಬೌಲರ್‌ಗಳೊಂದಿಗೆ ಬಲಿಷ್ಠ ತಂಡವನ್ನು ಆಲೌಟ್ ಮಾಡುವುದು ಸುಲಭವಲ್ಲ, ಆದರೆ ಅದು ಸ್ವತಃ ನಂಬಿಕೆಯಾಗಿತ್ತು" ಎಂದು ಹೇಳಿದ್ದಾರೆ.

"ಇದು ರಾತ್ರೋರಾತ್ರಿ ಸಿಕ್ಕ ಫಲಿತಾಂಶ ಎಂದು ಜನರು ನಂಬುತ್ತಾರೆ. ಆದರೆ ಇದು ರಾತ್ರೋರಾತ್ರಿ ಸಂಭವಿಸಿಲ್ಲ. ಇದು ಪೂರ್ಣಗೊಳ್ಳಲು ಐದು - ಆರು ವರ್ಷಗಳನ್ನು ತೆಗೆದುಕೊಂಡ ಪ್ರಕ್ರಿಯೆಯಾಗಿದೆ. ಈ ಆಟಗಾರರು ಕಳೆದ ಐದು - ಆರು ವರ್ಷಗಳಿಂದ ಪರಸ್ಪರ ಆಟವಾಡುತ್ತಿದ್ದಾರೆ. ಈ ಪ್ರವಾಸವು ಅವರಿಗೆ ಕಷ್ಟಕರವಾಗಿತ್ತು, ಇಲ್ಲಿ ಅವರು ಕಲಿತದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಸೋಲುವುದು ಬೇರೆ ವಿಷಯ, ಆದರೆ ಸೋಲಿನ ನಂತರ ನಿಮ್ಮನ್ನು ಪಂದ್ಯದಿಂದ ಕೈಬಿಡದಿರುವುದು ಉತ್ತಮ ನಿರ್ಧಾರ ಹೀಗಾಗಿ ಕೊಹ್ಲಿಗೆ ಮನ್ನಣೆ ನೀಡಬೇಕು"

ಸರಣಿಯನ್ನು ಗೆದ್ದ ನಂತರ ಭಾವುಕನಾಗಿದ್ದು, ಕಣ್ಣೀರು ಬರಲಾರಂಭಿಸಿತು ಎಂದು ರವಿಶಾಸ್ತ್ರಿ ಹೇಳಿದರು. 36 ರನ್‌ಗಳಿಗೆ ಆಲೌಟ್​ ಆಗಿ ಹೀನಾಯ ಸೋಲುಕಂಡ ನಂತರ ಚಾಂಪಿಯನ್‌ಗಳಂತೆ ಆಡುವುದು ಅವಾಸ್ತವಿಕವಾಗಿದೆ ಎಂದಿದ್ದಾರೆ.

ABOUT THE AUTHOR

...view details