ಕರ್ನಾಟಕ

karnataka

ETV Bharat / sports

ಅವಕಾಶ ಕೊಟ್ಟರೆ ಟೀಂ ಇಂಡಿಯಾ ಕೋಚ್​ ಆಗಲು ಸಿದ್ಧ: ಅಜರುದ್ದೀನ್​​​ - ಟೀಂ ಇಂಡಿಯಾ ಕೋಚ್​ ಹುದ್ದೆ

ಬರುವ ದಿನಗಳಲ್ಲಿ ಅವಕಾಶ ಸಿಕ್ಕರೆ ಖಂಡಿತವಾಗಿ ಟೀಂ ಇಂಡಿಯಾ ಕೋಚ್​ ಆಗಲು ಸಿದ್ಧ ಎಂದು ಮೊಹಮ್ಮದ್​ ಅಜರುದ್ದೀನ್​ ಹೇಳಿಕೆ ನೀಡಿದ್ದಾರೆ.

Mohammad Azharuddin
Mohammad Azharuddin

By

Published : Jun 15, 2020, 4:59 PM IST

ಹೈದರಾಬಾದ್​: ಬರುವ ದಿನಗಳಲ್ಲಿ ಅವಕಾಶ ನೀಡಿದ್ರೆ ಟೀಂ ಇಂಡಿಯಾ ಕೋಚ್​ ಆಗಿ ಸೇವೆ ಸಲ್ಲಿಸಲು ಸಿದ್ಧ ಎಂದು ಮಾಜಿ ಕ್ರಿಕೆಟರ್​ ಮೊಹಮ್ಮದ್​​ ಅಜರುದ್ದೀನ್​ ಹೇಳಿಕೆ ನೀಡಿದ್ದಾರೆ.

ಕೊರೊನಾ ವೈರಸ್​ನಿಂದಾಗಿ ಮುಂದೂಡಿಕೆಯಾಗಿರುವ ಇಂಡಿಯನ್​ ಪ್ರೀಮಿಯರ್​ ಲೀಗ್​ ಈ ವರ್ಷದ ಕೊನೆಯಲ್ಲಿ ನಡೆಯುವ ವಿಶ್ವಾಸ ವ್ಯಕ್ತಪಡಿಸಿರುವ ಅಜರುದ್ದೀನ್​, ಭಾರತ ತಂಡದೊಂದಿಗೆ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕರೆ ಖಂಡಿತಾ ಬಳಸಿಕೊಳ್ಳುವೆ ಎಂದು ಸಂದರ್ಶನವೊಂದಲ್ಲಿ ಭಾಗಿಯಾಗಿ ಹೇಳಿಕೊಂಡಿದ್ದಾರೆ.

ಟೀಂ ಇಂಡಿಯಾ ಕೋಚ್​ ಆಗಿರುವ ರವಿಶಾಸ್ತ್ರಿ ಕಾಲಾವಧಿ 2021ರ ಟಿ-20 ವಿಶ್ವಕಪ್​ವರೆಗೂ ಇದೆ. ಇದೇ ವೇಳೆ ಇಂದಿನ ದಿನಗಳಲ್ಲಿ ತಂಡದೊಂದಿಗೆ ಅನೇಕ ಸಹಾಯಕ ಸಿಬ್ಬಂದಿ ಪ್ರಯಾಣಿಸುವ ಅವಶ್ಯಕತೆ ಏನು ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಮೊಹಮ್ಮದ್​ ಅಜರುದ್ದೀನ್​​

ನಾನು ಬ್ಯಾಟಿಂಗ್​ ಹಾಗೂ ಫೀಲ್ಡಿಂಗ್​​ನಲ್ಲಿ ವಿಶೇಷತೆ ಹೊಂದಿದ್ದೇನೆ. ನಾನು ಯಾವುದೇ ತಂಡಕ್ಕೆ ತರಬೇತುದಾರನಾಗಿದ್ದರೆ ನನ್ನೊಂದಿಗೆ ಬ್ಯಾಟಿಂಗ್​ ತರಬೇತುದಾರನ ಅಗತ್ಯವಿಲ್ಲ ಎಂದು ಹೈದರಾಬಾದ್​​ ಕ್ರಿಕೆಟ್​​ ಅಸೋಸಿಯೇಷನ್​​ ಅಧ್ಯಕ್ಷ ಅಜರುದ್ದೀನ್​ ಹೇಳಿದ್ದಾರೆ.

ಕ್ರಿಕೆಟಿಗರು ಆದಷ್ಟು ಬೇಗ ತಮ್ಮ ಸಾರ್ಮಥ್ಯ ಹೊರ ಹಾಕಬೇಕಾದ ಅನಿವಾರ್ಯತೆ ಇಂದು ನಿರ್ಮಾಣವಾಗಿದೆ. ಐಪಿಎಲ್​ ಅದಕ್ಕೆ ಉತ್ತಮ ವೇದಿಕೆ. ಇಂಡಿಯನ್​ ಪ್ರೀಮಿಯರ್​ ಲೀಗ್​ ಇಲ್ಲದಿದ್ದರೆ ಹಾರ್ದಿಕ್​ ಪಾಂಡ್ಯ, ಬುಮ್ರಾ ಇದೀಗೂ ಪ್ರಥಮ ದರ್ಜೆ ಕ್ರಿಕೆಟ್​​ನಲ್ಲಿ ಆಡಬೇಕಾಗಿತ್ತು ಎಂದಿದ್ದಾರೆ.

ABOUT THE AUTHOR

...view details