ವೆಲ್ಲಿಂಗ್ಟನ್: ಕೊರೊನಾ ಸೋಂಕಿನಿಂದ ಲಾಕ್ಡೌನ್ ಘೋಷಣೆ ಮಾಡಿದಾಗಿನಿಂದ ಭಾರತದಲ್ಲೇ ಸಿಲುಕಿದ್ದ ಆರ್ಸಿಬಿ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಇಂದು ನ್ಯೂಜಿಲ್ಯಾಂಡ್ ತಲುಪಿದ್ದು, ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
ತವರಿಗೆ ಮರಳಿದ ಆರ್ಸಿಬಿ ತಂಡದ ನಿರ್ದೇಶಕ: ಪ್ರಧಾನಿ ಮೋದಿಗೆ ಧನ್ಯವಾದ - ಪ್ರಧಾನಿ ಮೋದಿಗೆ ಮೈಕ್ ಹೆಸ್ಸನ್ ಧನ್ಯವಾದ
ಲಾಕ್ಡೌನ್ ಘೋಷಣೆ ನಂತರ ಭಾರತದಲ್ಲೇ ಸಿಲುಕಿದ್ದ ಆರ್ಸಿಬಿ ತಂಡದ ನಿರ್ದೇಶಕ ಮೈಕ್ ಹೆಸ್ಸನ್ ನ್ಯೂಜಿಲ್ಯಾಂಡ್ಗೆ ಮರಳಿದ್ದು, ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.
ತವರಿಗೆ ಮರಳುತ್ತಿದ್ದಂತೆ ಟ್ವೀಟ್ ಮಾಡಿರುವ ಹೆಸ್ಸನ್, ಬಸ್ನಲ್ಲೇ ಒಂದು ದಿನ ಕಳೆದ ನಂತರ ಮುಂಬೈ ವಿಮಾನ ನಿಲ್ದಾಣ ತಲುಪಿದೆ. ಹಾಗಾಗಿ ತವರಿಗೆ ಮರಳಲು ನೆರವಾದ ಭಾರತ ಪ್ರಧಾನಿ ನರೇಂದ್ರ ಮೋದಿ, ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂದಾ ಅರ್ಡೆನ್, ವಿದೇಶಾಂಗ ಇಲಾಖೆ ಮತ್ತು ಏರ್ಲೈನ್ಸ್ಗೆ ಧನ್ಯವಾದ ಎಂದು ಟ್ವೀಟ್ ಮಾಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಆವೃತ್ತಿಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಿರ್ದೇಶಕ ಮೈಕ್ ಹೆಸ್ಸನ್ ಬೆಂಗಳೂರಿನಲ್ಲೇ ಇದ್ದರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಏಪ್ರಿಲ್ 15ಕ್ಕೆ ಟೂರ್ನಿಯನ್ನು ಮುಂದೂಡಲಾಗಿತ್ತು. ಆದರೆ ಮತ್ತೊಮ್ಮೆ ಲಾಕ್ಡೌನ್ ವಿಸ್ತರಣೆ ಮಾಡಿದ್ದರಿಂದ ಅನಿರ್ದಿಷ್ಟಾವಧಿವರೆಗೆ ಟೂರ್ನಿಯನ್ನು ಮುಂದೂಡಲಾಗಿದೆ.