ಬೆಂಗಳೂರು: ದಿಢೀರ್ ಆಗಿ ಸಾಮಾಜಿಕ ಜಾಲತಾಣದ ತನ್ನ ಪ್ರೊಫೈಲ್ ಫೋಟೋ ಡಿಲೀಟ್ ಮಾಡಿ ಅಚ್ಚರಿ ಮೂಡಿಸಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇದೀಗ ಹೊಸ ಲೋಗೋ ಬಿಡುಗಡೆ ಮಾಡಿ ಮತ್ತಷ್ಟು ಕುತೂಹಲ ಕೆರಳಿಸಿದೆ. ಆರ್ಸಿಬಿ ತಂಡದ ನೂತನ ಲೋಗೋವನ್ನು ಪ್ರಶಂಸಿರುವ ಹೈದರಾಬಾದ್ ತಂಡ ನಯವಾಗಿಯೇ ಕಾಲೆಳೆದಿದೆ.
'ಈ ಸಲ ಲೋಗೋ ಚಾಲ ಬಾಗುಂದಿ': ಕನ್ನಡ,ತೆಲುಗಿನಲ್ಲಿ RCB ಕಾಲೆಳೆದ ಆರೆಂಜ್ ಆರ್ಮಿ - ಆರ್ಸಿಬಿ ಕಾಲೆಳೆದ ಹೈದರಾಬಾದ್ ತಂಡ
ಆರ್ಸಿಬಿ ತಂಡದ ನೂತನ ಲೋಗೊ ಪ್ರಶಂಸಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ನಯವಾಗಿಯೇ ಬೆಂಗಳೂರು ತಂಡದ ಕಾಲೆಳೆದಿದೆ.
!['ಈ ಸಲ ಲೋಗೋ ಚಾಲ ಬಾಗುಂದಿ': ಕನ್ನಡ,ತೆಲುಗಿನಲ್ಲಿ RCB ಕಾಲೆಳೆದ ಆರೆಂಜ್ ಆರ್ಮಿ SunRisers Hyderabad latest news,ಆರ್ಸಿಬಿ ಕಾಲೆಳೆದ ಹೈದರಾಬಾದ್ ತಂಡ..](https://etvbharatimages.akamaized.net/etvbharat/prod-images/768-512-6071667-thumbnail-3x2-brm.jpg)
ಆರ್ಸಿಬಿ ನೂತನ ಲೋಗೋ ಬಿಡುಗಡೆಗೊಳಿಸಿ ಮಾಡಲಾದ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಸನ್ರೈಸರ್ ಹೈದರಾಬಾದ್ ತಂಡ 'ಈ ಸಲ ಲೋಗೋ ಚಾಲ ಬಾಗುಂದಿ ನಮ್ಮ ಆರೆಂಜ್ ಆರ್ಮಿ ಈ ಆವೃತ್ತಿಯಲ್ಲೂ ಉತ್ತಮ ಪ್ರದರ್ಶನ ನೀಡಲು ಸಿದ್ದವಾಗಿದೆ' ಎಂದು ಡೇವಿಡ್ ವಾರ್ನರ್ ಮತ್ತು ಜಾನಿ ಬೈರ್ಸ್ಟೋವ್ ಸಂಭ್ರಮಿಸುತ್ತಿರುವ ಫೋಟೋ ಹಂಚಿಕೊಂಡಿದೆ.
ಅಂದಹಾಗೆ ಹೈದರಾಬಾದ್ ತಂಡ ಪೋಸ್ಟ್ ಮಾಡಿರುವ ಈ ಪೋಟೋ 2019ರಲ್ಲಿ ಆರ್ಸಿಬಿ ವಿರುದ್ಧ ನಡೆದ ಪಂದ್ಯದ್ದು. ಈ ಪಂದ್ಯದಲ್ಲಿ ವಾರ್ನರ್ ಮತ್ತು ಬೈರ್ಸ್ಟೋವ್ ಇಬ್ಬರು ಶತಕ ಸಿಡಿಸಿದ್ದರು. ಬೆಂಗಳೂರು ತಂಡದ ವಿರುದ್ಧ ವಾರ್ನರ್ ಪಡೆ 118ರನ್ಗಳ ಬೃಹತ್ ಗೆಲುವು ದಾಖಲಿಸಿತ್ತು. ಈ ಪೋಟೋ ಪೋಸ್ಟ್ ಮಾಡುವ ಮೂಲಕ ಹೈದರಾಬಾದ್ ತಂಡ 2020ರಲ್ಲೂ ನಮ್ಮ ತಂಡ ಉತ್ತಮ ಪ್ರದರ್ಶನ ತೋರಲಿದೆ ಎಂದು ಬೆಂಗಳೂರು ತಂಡಕ್ಕೆ ಸವಾಲೆಸೆದಿದೆ.