ಹೈದರಾಬಾದ್:ಎಬಿಡಿ ವಿಲಿಯರ್ಸ್ ವಿರಾಟ್ ಕೊಹ್ಲಿ ಬಾರಿಸಿರುವ ಚೆಂಡನ್ನು ಹುಡುಕಿಕೊಡಿ ಎಂದು ನಾಸಾಗೆ ಮನವಿ ಮಾಡಿರುವ ಆರ್ಸಿಬಿ ಟ್ವೀಟ್ ಟ್ರೋಲಿಗರಿಗೆ ಆಹಾರವಾಗಿದೆ.
'ಮೊದಲು ಕಪ್ ಗೆಲ್ಲಿ, ಆಮೇಲೆ ಟ್ವೀಟ್ ಮಾಡಿ'..! ಆರ್ಸಿಬಿಗೆ ನೆಟಿಜನ್ಸ್ ಬುದ್ಧಿಮಾತು - ಆರ್ಸಿಬಿ ಟ್ವೀಟ್ ಟ್ರೋಲ್
ಆರ್ಸಿಬಿ ಟ್ವೀಟ್ಗೆ ನೆಟಿಜನ್ಸ್ ವಿವಿಧ ರೀತಿಯಲ್ಲಿ ಕಾಲೆಳೆದಿದ್ದಾರೆ. ಚೆಂಡು ಹುಡುಕುವ ಬದಲು ಪಂದ್ಯ ಗೆಲ್ಲೋದು ಹೇಗೆ ಎಂದು ಆರ್ಸಿಬಿಗೆ ತಿಳಿಸುವ ಅಗತ್ಯವಿದೆ ಎಂದು ಕಾಮೆಂಟ್ ಬಂದಿದೆ.
ವಿಕ್ರಮ್ ಲ್ಯಾಂಡರ್ ಪತ್ತೆ ಮಾಡಿರುವ ಬಗ್ಗೆ ಮಂಗಳವಾರ ನಾಸಾ ಆಧಿಕೃತವಾಗಿ ಘೋಷಿಸಿಕೊಂಡಿತ್ತು. ಇದೇ ವಿಚಾರಕ್ಕೆ ಟ್ವೀಟ್ ಮಾಡಿದ್ದ ಆರ್ಸಿಬಿ, ವಿರಾಟ್ ಹಾಗೂ ಎಬಿಡಿ ಹೊಡೆದಿರವ ಚೆಂಡನ್ನು ಪತ್ತೆ ಹಚ್ಚಲು ಸಹಕರಿಸಿ ಎಂದು ನಾಸಾಗೆ ಮನವಿ ಮಾಡಿತ್ತು.
ಆರ್ಸಿಬಿ ಟ್ವೀಟ್ಗೆ ನೆಟಿಜನ್ಸ್ ವಿವಿಧ ರೀತಿಯಲ್ಲಿ ಕಾಲೆಳೆದಿದ್ದಾರೆ. ಚೆಂಡು ಹುಡುಕುವ ಬದಲು ಪಂದ್ಯ ಗೆಲ್ಲೋದು ಹೇಗೆ ಎಂದು ಆರ್ಸಿಬಿಗೆ ತಿಳಿಸುವ ಅಗತ್ಯವಿದೆ ಎಂದು ಕಾಮೆಂಟ್ ಬಂದಿದೆ.
ಆರ್ಸಿಬಿ ಟ್ವಿಟರ್ ಅಡ್ಮಿನ್ ಬದಲಾಯಿಸಿ, ಪಂದ್ಯ ಸೋಲೋದು ಸಹ ಈ ಟ್ವೀಟ್ನಲ್ಲಿ ಕೆಟ್ಟದಾಗಿರುವುದಿಲ್ಲ ಎನ್ನುವುದು ಇನ್ನೊಂದು ಕಾಮೆಂಟ್. ಮೊದಲು ಕಪ್ ಗೆಲ್ಲೋದಿಕ್ಕೆ ಸಮರ್ಥ ವ್ಯಕ್ತಿಯನ್ನು ಹುಡುಕಿ ಎಂದು ಮತ್ತೊಂದು ಕಾಮೆಂಟ್ ಬಂದಿದೆ.