ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ಗೆ ಯುಎಇಗೆ ತೆರಳುವ ಮುನ್ನ ಬೆಂಗಳೂರಿನಲ್ಲಿ ತರಬೇತಿಗಾಗಿ ಆಗಮಿಸಿರುವ ಆರ್ಸಿಬಿ ಆಟಗಾರರು, ಕ್ವಾರಂಟೈನ್ ಅವಧಿಯಲ್ಲಿ ಹೋಟೆಲ್ ಕಾರಿಡಾರ್ನಲ್ಲಿ ಅಭ್ಯಾಸ ನಡೆಸಿದ್ದಾರೆ.
ಈಗಾಗಲೇ ಬೆಂಗಳೂರಿಗೆ ಧಾವಿಸಿರುವ ಪಾರ್ಥೀವ್ ಪಟೇಲ್, ಶಿವಂ ದುಬೆ, ನವದೀಪ್ ಸೈನಿ, ಪವನ್ ನೇಗಿ ಸೇರಿದಂತೆ ಕೆಲವು ಆಟಗಾರರು ಹೋಟೆಲ್ನ ಕಾರಿಡಾರ್ನಲ್ಲಿ ಕೆಲವು ಸಮಯ ಅಭ್ಯಾಸ ನಡೆಸಿದ್ದಾರೆ.
ಆಟಗಾರರು ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಶೇರ್ ಮಾಡಿಕೊಂಡಿರುವ ಆರ್ಸಿಬಿ ತಮ್ಮ ತಂಡದ ಆಟಗಾರರಿಗೆ ಗ್ರೌಂಡ್ ಇಲ್ಲದಿದ್ದರೂ ಪರವಾಗಿಲ್ಲ. ಕ್ವಾರಂಟೈನ್ ಅವಧಿಯಲ್ಲಿ ಅಭ್ಯಾಸ ಆರಂಭಿಸಿದ್ದಾರೆ ಎಂದು ಟ್ವೀಟ್ ಮಾಡಿದೆ.
ಮತ್ತೊಂದು ವಿಡಿಯೋದಲ್ಲಿ ವಿಕೆಟ್ ಕೀಪರ್ ಪಾರ್ಥೀವ್ ಪಟೇಲ್ ಸ್ಕಿಪ್ಪಿಂಗ್ ಮಾಡುತ್ತಿರುವ ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ.
ಆಗಸ್ಟ್ 21 ರಂದು ಆರ್ಸಿಬಿ ಆಟಗಾರರು ದುಬೈ ವಿಮಾನವನ್ನೇರಲಿದ್ದಾರೆ. ಅಲ್ಲಿ ಒಂದು ವಾರಗಳ ಕಾಲ ಕ್ವಾರಂಟೈನ್ನಲ್ಲಿ ಇರಲಿದ್ದಾರೆ. ಈ ವೇಳೆ, 2 ಬಾರಿ ಕೋವಿಡ್ 19 ಪರೀಕ್ಷೆಗೆ ಒಳಗಾಗಲಿದ್ದಾರೆ.