ಚೆನ್ನೈ:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ 14ನೇ ಆವೃತ್ತಿಯ ಐಪಿಎಲ್ಗಾಗಿ ಗುರುವಾರ ಚೆನ್ನೈ ತಲುಪಿದ್ದು, 7 ದಿನಗಳ ಕಡ್ಡಾಯ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿ ಇಂದು ಬೆಳಿಗ್ಗೆ ಚೆನ್ನೈಗೆ ಬಂದಿಳಿದಿದ್ದರು. ಮಧ್ಯಾಹ್ನ ವಿರಾಟ್ ಕೊಹ್ಲಿ ಕೂಡ ನಗರಕ್ಕೆ ಆಗಮಿಸಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದ ನಂತರ ಬಯೋಬಬಲ್ನಿಂದ ಹೊರ ಹೋಗಿದ್ದರಿಂದ ಬಿಸಿಸಿಐ ಪ್ರೋಟೋಕಾಲ್ ಪ್ರಕಾರ 7 ದಿನಗಳ ಕಾಲ ಹೋಟೆಲ್ನಲ್ಲಿ ಕ್ವಾರಂಟೈನ್ಗೆ ಒಳಗಾಗಬೇಕಿದೆ. ನಂತರ ತಂಡ ಸೇರಿಕೊಳ್ಳಬಹುದು. ಇಂದಿನಿಂದ ಕ್ವಾರಂಟೈನ್ ಆರಂಭಿಸುವ ಕೊಹ್ಲಿ, ಏಪ್ರಿಲ್ 7 ಅಥವಾ 8ರಂದು ತಂಡದ ಜೊತೆಗೆ ಅಭ್ಯಾಸ ಮಾಡಲಿದ್ದಾರೆ.