ಕರ್ನಾಟಕ

karnataka

ETV Bharat / sports

54 ಎಸೆತಗಳಲ್ಲಿ 137ರನ್​ ಗಳಿಸಿದ್ದ 'ಮೊಹಮ್ಮದ್​ ಅಜರುದ್ದೀನ್' ಆರ್​ಸಿಬಿ ಪಾಲು! - ರಾಯಲ್​ ಚಾಲೆಂಜರ್ಸ್​ ಬೆಂಗಳೂರು

ವಾಂಖೆಡೆ ಮೈದಾನದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚು ಹರಿಸಿ ಎಲ್ಲರ ಗಮನ ಸೆಳೆದಿದ್ದ ಕೇರಳದ ಪ್ಲೇಯರ್ಸ್​ಗೆ ಆರ್​ಸಿಬಿ ಇದೀಗ ಮೂಲ ಬೆಲೆ ನೀಡಿ ಖರೀದಿ ಮಾಡಿದೆ.

Mohammed Azharudeen
Mohammed Azharudeen

By

Published : Feb 18, 2021, 7:54 PM IST

ಚೆನ್ನೈ:ಸೈಯದ್ ಮುಸ್ತಾಕ್ ಅಲಿ ಟೂರ್ನಿಯಲ್ಲಿ ಮುಂಬೈ ತಂಡದ ವಿರುದ್ಧ ಕೇವಲ 54 ಎಸೆತಗಳಲ್ಲಿ ಬರೋಬ್ಬರಿ ಅಜೇಯ 137ರನ್​ಗಳಿಕೆ ಮಾಡಿ ಒಂದೇ ರಾತ್ರಿಯಲ್ಲಿ ಹೀರೋ ಆಗಿದ್ದ ಮೊಹಮ್ಮದ್​ ಅಜರುದ್ದೀನ್​ಗೆ ಇದೀಗ ಆರ್​ಸಿಬಿ ಬಾಗಿಲು ತೆರೆದಿದೆ.

ಓದಿ: ಕೊರೊನಾ ಕಾಲದಲ್ಲೂ ಕ್ರಿಕೆಟರ್ಸ್​​ಗೆ​ ಲಕ್ಷ್ಮಿ ಕಟಾಕ್ಷ... ಅನ್​ಕ್ಯಾಪ್ಡ್​ ಮೆರೆಡಿತ್​ಗೆ 8 ಕೋಟಿ ರೂ. !

ಐಪಿಎಲ್​ನ 14ನೇ ಆವೃತ್ತಿ ಇಂಡಿಯನ್​ ಪ್ರೀಮಿಯರ್​ ಲೀಗ್​ನ ಹರಾಜು ಪ್ರಕ್ರಿಯೆಯಲ್ಲಿ 20 ಲಕ್ಷ ಮೂಲ ಬೆಲೆ ಹೊಂದಿದ್ದ ಅಜರುದ್ದೀನ್​ಗೆ ವಿರಾಟ್​ ಕೊಹ್ಲಿ ನೇತೃತ್ವದ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡ ಮೂಲ ಬೆಲೆ ನೀಡಿ ಖರೀದಿ ಮಾಡಿದೆ.

ಓದಿ: 5.25 ಕೋಟಿ ರೂ. ನೀಡಿ 'ಶಾರುಖ್​ ಖಾನ್'​ ಖರೀದಿಸಿದ ಪ್ರೀತಿ ಜಿಂಟಾ... ಯಾರು ಈ ಪ್ಲೇಯರ್​!?

ಕೇರಳದ ಕಾಸರಗೋಡು ಕ್ರಿಕೆಟರ್​ ಆಗಿರುವ ಮೊಹಮ್ಮದ್ ಅಜರುದ್ದೀನ್​ ಈ ಹಿಂದಿನಿಂದಲೂ ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಕನಸು ಕಂಡಿದ್ದರು. ಅದರಂತೆ ಅವರನ್ನ ಇದೀಗ ಖರೀದಿ ಮಾಡಲಾಗಿದೆ. ದೇಶಿ ಟೂರ್ನಿಯಲ್ಲಿ ಕೇವಲ 54 ಎಸೆತಗಳಲ್ಲಿ 9 ಬೌಂಡರಿ, 11 ಸಿಕ್ಸರ್ ಸಿಡಿಸಿ ಮಿಂಚಿದ್ದ ಈ ಪ್ಲೇಯರ್​​ ಸೈಯದ್ ಮುಸ್ತಾಕ್​ ಅಲಿಯಲ್ಲಿ ಅತಿ ವೇಗವಾಗಿ ಶತಕ ಸಿಡಿಸಿದ ಎರಡನೇ ಪ್ಲೇಯರ್ಸ್​ ಆಗಿದ್ದಾರೆ. 26 ವರ್ಷದ ಈ ಪ್ಲೇಯರ್​ ಇಲ್ಲಿಯವರೆಗೆ 24 ಟಿ-20 ಪಂದ್ಯಗಳನ್ನಾಡಿದ್ದು, 451ರನ್​ಗಳಿಕೆ ಮಾಡಿದ್ದಾರೆ.

ABOUT THE AUTHOR

...view details