ಕರ್ನಾಟಕ

karnataka

ETV Bharat / sports

2020ರ ಐಪಿಎಲ್​​ಗೂ ಮೊದಲು ಆರಂಭವಾಗಲಿದೆ 'ಆರ್​ಸಿಬಿ ಬಾರ್ & ಕೆಫೆ' - ಆರ್​ಸಿಬಿ ಲೇಟೆಸ್ಟ್ ನ್ಯೂಸ್

ಇಂದು ಬೆಳಿಗ್ಗೆ ನೂತನ ಲೋಗೋ ಪರಿಚಯಿಸಿದ್ದ ಆರ್​ಸಿಬಿ ತಂಡ ಇದೀಗ ಹೊಸ ಜರ್ಸಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದೆ.

RCB Bar & Cafe,ಆರಂಭವಾಗಲಿದೆ ಆರ್​ಸಿಬಿ ಬಾರ್ & ಕೆಫೆ
ಆರಂಭವಾಗಲಿದೆ ಆರ್​ಸಿಬಿ ಬಾರ್ & ಕೆಫೆ

By

Published : Feb 14, 2020, 7:51 PM IST

ಬೆಂಗಳೂರು: ನೂತನ ಲೋಗೋ ಬಿಡುಗಡೆ ಮಾಡಿದ್ದ ಆರ್​ಸಿಬಿ ತಂಡ ಇದೀಗ ನೂತನ ಜರ್ಸಿ ಅಭಿಮಾನಿಗಳಿಗೆ ಪರಿಚಯಿಸಿದ್ದಲ್ಲದೆ ಬಾರ್​ ಆ್ಯಂಡ್ ಕೆಫೆ ಪ್ರಾರಂಭಿಸುವುದಾಗಿ ಹೇಳಿದೆ.

ಈ ಬಗ್ಗೆ ಟ್ವೀಟಿಸಿರುವ ಆರ್​ಸಿಬಿ, 2020ರ ಐಪಿಎಲ್​​ಗೂ ಮೊದಲು ಆರ್​ಸಿಬಿ ಬಾರ್ & ಕೆಫೆ ಪ್ರಾರಂಭ ಮಾಡಲಾಗುವುದು. ಇಲ್ಲಿ ನಮ್ಮ ತಂಡದ ಆಟಗಾರರನ್ನು ಭೇಟಿ ಮಾಡಬಹುದು ಎಂದು ಹೇಳಿದೆ.

ಇಂದು ಬೆಳಿಗ್ಗೆಯಷ್ಟೆ ನೂತನ ಲೋಗೋ ಬಿಡುಗಡೆ ಮಾಡಿದ್ದ ಬೆಂಗಳೂರು ತಂಡ ನೀವು ಕಳೆದ ಅನೇಕ ದಿನಗಳಿಂದ ಕಾಯುತ್ತಿದ್ದ ದಿನ ಇದೀಗ ಬಂದಿದೆ. ಹೊಸ ದಶಕ, ಹೊಸ ಆರ್​​ಸಿಬಿ, ಹೊಸ ಲೋಗೋ ಪರಿಚಯಿಸಿತ್ತು.

ಇದೀಗ ಆಟಗಾರರ ನೂತನ ಜರ್ಸಿ ಬಿಡುಗಡೆ ಮಾಡಿದೆ. ಈ ಹಿಂದೆ ಇದ್ದ ಕೆಂಪು ಮತ್ತು ಕಪ್ಪು ಮಿಶ್ರಿತ ಬಣ್ಣದಲ್ಲೆ ನೂತನ ಜೆರ್ಸಿ ಸಿದ್ಧಪಡಿಸಿದ್ದು, ಹೋಸ ಲೋಗೋ ಜೊತೆ ನೂತನ ಜೆರ್ಸಿ ತೊಟ್ಟಿರುವ ಎಬಿಡಿ, ವಿರಾಟ್, ಮತ್ತು ಚಹಾಲ್ ಫೋಟೋವನ್ನ ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದೆ.

ಟ್ವಿಟ್ಟರ್​ನಲ್ಲಿ ಈ ಹಿಂದೆ ಇದ್ದ ಬೆಂಗಳೂರು ಎಂಬ ಹೆಸರು ತೆಗೆದಿದ್ದ ಆರ್​ಸಿಬಿ ತಂಡ ಮತ್ತೆ ಬೆಂಗಳೂರು ಎಂಬ ಪದವನ್ನು ಸೇರಿಸಿದೆ. ಆದರೆ Bangalore(ಬ್ಯಾಂಗ್​ಲೊರ್) ಬದಲು Bengaluru(ಬೆಂಗಳೂರು) ಎಂದು ಸೇರಿಸಿ ಅಂತ ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಬಗ್ಗೆ ಟ್ವೀಟ್​ ಮಾಡಿರುವ ಆರ್​ಸಿಬಿ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ ಕಾಯಿರಿ ಎಂದು ಹೇಳಿದೆ. ಹೀಗಾಗಿ ಆರ್​ಸಿಬಿ ಮುಂದಿನ ಸರ್ಪ್ರೈಸ್​ಗೆ ಅಭಿಮಾನಿಗಳು ಕಾಯುತ್ತಿದ್ದಾರೆ.

ABOUT THE AUTHOR

...view details