ಹೈದರಾಬಾದ್:ಐಪಿಎಲ್ 13ನೇ ಆವೃತ್ತಿಗೆ ಸಂಬಂಧಿಸಿದಂತೆ ಹಲವು ಪ್ರಕ್ರಿಯೆಗಳು ನಡೆಯುತ್ತಿದ್ದು, ಇದರ ಜೊತೆಯಲ್ಲೇ ತಂಡಗಳು ಸಹ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಪೋಸ್ಟ್ಗಳ ಮೂಲಕ ಗಮನ ಸೆಳೆಯುತ್ತಿವೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಿಂಬಾಲಕರಿಗೆ ಪ್ರಶ್ನೆಯೊಂದು ಕೇಳಿತ್ತು. ಈ ಪ್ರಶ್ನೆಗೆ ಅದೇ ತಂಡ ಪಾರ್ಥಿವ್ ಪಟೇಲ್ ಕಮೆಂಟ್ ಸದ್ಯ ಸಂಚಲನ ಮೂಡಿಸಿದೆ.
ಆರ್ಸಿಬಿ ಪೋಸ್ಟ್ಗೆ ಪಾರ್ಥಿವ್ ಕಾಮೆಂಟ್ "ನಾವು 240 ರನ್ಗಳನ್ನು ಗುರಿಯನ್ನು ಬೆನ್ನತ್ತಬೇಕಿದೆ. ವಿರಾಟ್ ಕೊಹ್ಲಿ ನಾನ್-ಸ್ಟ್ರೈಕರ್ ಎಂಡ್ನಲ್ಲಿದ್ದಾರೆ. ಹಾಗಿದ್ದರೆ ಇವರ ಜೊತೆಯಲ್ಲಿ ಪಾರ್ಥಿವ್ ಪಟೇಲ್ ಅಥವಾ ದೇವದತ್ ಪಡಿಕ್ಕಲ್ ಇವರಿಬ್ಬರಲ್ಲಿ ಇನ್ನಿಂಗ್ಸ್ ಆರಂಭಿಸಬೇಕೆಂದಿರುವ ಇನ್ನೋರ್ವ ಆಟಗಾರ ಯಾರು" ಎಂದು ಆರ್ಸಿಬಿ ಪ್ರಶ್ನೆ ಮಾಡಿತ್ತು.
ಈ ಪ್ರಶ್ನೆಗೆ ಆರ್ಸಿಬಿ ಆರಂಭಿಕ ಆಟಗಾರ ಪಾರ್ಥಿವ್ ಪಟೇಲ್ ದಿಟ್ಟ ಉತ್ತರ ನೀಡಿದ್ದಾರೆ. ನೀವ್ಯಾಕೆ ನಮ್ಮಿಂದ 239 ರನ್ ನೀಡಬೇಕು ಎಂದು ನಿರೀಕ್ಷಿಸುತ್ತಿದ್ದೀರಾ ಎಂದು ಆರ್ಸಿಬಿ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ.
ಆರ್ಸಿಬಿ ತಂಡದ ಆರಂಭಿಕ ಆಟಗಾರನಾಗಿರುವ ಪಾರ್ಥಿವ್ ತಂಡದ ಹಾಗೂ ಅಭಿಮಾನಿಗಳ ನಿರೀಕ್ಷೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ದೇಶೀಯ ಟೂರ್ನಿಯಲ್ಲಿ ಆರ್ಸಿಬಿಯಲ್ಲಿ ಬೆಂಚ್ ಕಾಯುತ್ತಿರುವ ದೇವದತ್ ಪಡಿಕ್ಕಲ್ ಆಟದಿಂದ ಪಾರ್ಥಿವ್ ಸ್ಥಾನಕ್ಕೆ ಪೈಪೋಟಿ ಎದುರಾಗಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.