ಮುಂಬೈ:ಟೀಂ ಇಂಡಿಯಾದ ಮುಖ್ಯ ಕೋಚ್ ಹುದ್ದೆಗಾಗಿ ಅರ್ಜಿ ಗುಜರಾಯಿಸಿದ್ದ ನ್ಯೂಜಿಲ್ಯಾಂಡ್ ಕ್ರಿಕೆಟ್ನ ಮಾಜಿ ಕೋಚ್ ಮೈಕ್ ಹೆಸ್ಸನ್ ಅವರನ್ನು ರವಿಶಾಸ್ತ್ರಿ ಹಿಂದಿಕ್ಕಿದ್ದು ಎಲ್ಲರಿಗೂ ತಿಳಿದು ವಿಚಾರ. ಈ ಮಧ್ಯೆ ಭಾರತದಲ್ಲೇ ಅವರಿಗೆ ಮತ್ತೊಂದು ಅವಕಾಶದ ಬಾಗಿಲು ತೆರೆದಿದೆ.
ಆಗಸ್ಟ್ 16ರಂದು ನಡೆದ ಸಂದರ್ಶನದಲ್ಲಿ ಕಪಿಲ್ ದೇವ್ ನೇತೃತ್ವದ ಕ್ರಿಕೆಟ್ ಸಲಹಾ ಸಮಿತಿ, ನ್ಯೂಜಿಲ್ಯಾಂಡ್ ತಂಡದ ಮಾಜಿ ಕೋಚ್ ಮೈಕ್ ಹೆಸ್ಸನ್ ಅವರ ಹೆಸರನ್ನು ಟೀಂ ಇಂಡಿಯಾ ಹೆಡ್ ಕೋಚ್ ಆಗಿ ಅಂತಿಮಗೊಳಿಸಿತ್ತು. ಆದರೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸಲಹೆ ಮೇರೆಗೆ ಇನ್ನೊಂದು ಅವಧಿಗೆ ರವಿಶಾಸ್ತ್ರಿಯನ್ನೇ ತಂಡದ ಕೋಚ್ ಆಗಿ ಮರುನೇಮಕಗೊಳಿಸಿ ಆದೇಶ ಹೊರಡಿಸಿದ್ದರು. ಇದೀಗ ಇಂಡಿಯನ್ ಪ್ರೀಮಿಯರ್ ಲೀಗ್ನ ಆರ್ಸಿಬಿ ತಂಡ ಹೆಸ್ಸನ್ ಅವರಿಗೆ ಮಣೆ ಹಾಕಿದೆ.
ಆರ್ಸಿಬಿ ತಂಡ ಮೈಕ್ ಹೆಸ್ಸನ್ ಅವರಿಗೆ ತಂಡದ ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕನ್ನಾಗಿ ಆಯ್ಕೆ ಮಾಡಿದೆ. ಜತೆಗೆ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್ ಸೈಮನ್ ಕ್ಯಾಟಿಚ್ ಅವರನ್ನು ತಂಡದ ಮುಖ್ಯ ಕೋಚ್ ಆಗಿ ನೇಮಕಗೊಳಿಸಿದೆ. ಆರ್ಸಿಬಿ ತಂಡಕ್ಕೆ ಇಷ್ಟು ದಿನ ಗ್ಯಾರಿ ಕರ್ಸ್ಟನ್ ಕೋಚ್ ಆಗಿದ್ದರು. ತಂಡದ ಬೌಲಿಂಗ್ ಕೋಚ್ ಆಗಿದ್ದ ಆಶಿಶ್ ನೇಹ್ರಾಗೂ ತಂಡದಿಂದ ಕೊಕ್ ನೀಡಲಾಗಿದೆ.
ಆರ್ಸಿಬಿ ತಂಡದಲ್ಲಿ ಇಷ್ಟು ದಿನ ಡೈರೆಕ್ಟರ್ ಹುದ್ದೆ ಇರಲಿಲ್ಲ. ಇದೇ ಮೊದಲ ಬಾರಿಗೆ ಈ ಹುದ್ದೆ ಕ್ರಿಯೆಟ್ ಮಾಡಿ ಹೆಸ್ಸನ್ ನೇಮಕ ಮಾಡಿಕೊಂಡಿದೆ. ಕಳೆದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿದ್ದ ಹೆಸ್ಸನ್, ಟೀಂ ಇಂಡಿಯಾ ಕೋಚ್ ಹುದ್ದೆ ಮೇಲೆ ಕಣ್ಣಿಟ್ಟು ರಾಜೀನಾಮೆ ನೀಡಿದ್ದರು. ಆದರೆ ಅವರನ್ನು ಕ್ರಿಕೆಟ್ ಸಲಹಾ ಸಮಿತಿ ಆಯ್ಕೆ ಮಾಡಿರಲಿಲ್ಲ.
ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್ಮನ್ ಸೈಮನ್ ಕ್ಯಾಟಿಚ್, ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.