ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್ನಲ್ಲಿ ಇದೇ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರಿಂದ ಉದ್ಘಾಟನೆ ಮಾಡಿಸಲಾಗಿತ್ತು. ಇದೀಗ ವಿಶ್ವದಲ್ಲೇ 3ನೇ ಬೃಹತ್ ಸ್ಟೇಡಿಯಂ ಜೈಪುರದಲ್ಲಿ ನಿರ್ಮಿಸಲು ಭರ್ಜರಿ ಪ್ಲಾನ್ ತಯಾರಾಗುತ್ತಿದೆ.
ವಿಶ್ವದಲ್ಲೇ ಅತ್ಯಂತ ಬೃಹತ್ ಕ್ರಿಕೆಟ್ ಸ್ಟೇಡಿಯಂ ಈಗಾಗಲೇ ಭಾರತದಲ್ಲಿ ನಿರ್ಮಾಣವಾಗಿದೆ. ಇದೀಗ ರಾಜಸ್ಥಾನ ಕ್ರಿಕೆಟ್ ಅಸೋಸಿಯೇಶನ್ ಜೈಪುರದಿಂದ 25 ಕಿ.ಮೀ. ದೂರದ ಲ್ಲಿಹೆಚ್ಚಿನ ಸಂಖ್ಯೆಯ ಜನರು ಕುಳಿತು ವೀಕ್ಷಿಸುವ ವಿಶ್ವದ 3ನೇ ದೊಡ್ಡ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಪ್ಲಾನ್ ಸಿದ್ಧಪಡಿಸಲಾಗುತ್ತಿದೆ ಎಂದು ಆರ್ಸಿಎ ಕಾರ್ಯದರ್ಶಿ ಮಹೇಂದ್ರ ಶರ್ಮಾ ತಿಳಿಸಿದ್ದಾರೆ.