ಕರ್ನಾಟಕ

karnataka

ETV Bharat / sports

ನೀ ಬಿಟ್ಟರೂ ನಾ ಬಿಡೆನು ಎನ್ನುವಂತಿದೆ ಜಡ್ಡು-ಮಂಜ್ರೇಕರ್​ ಟ್ವೀಟ್​ ವಾರ್!​ - ಸಂಜಯ್ ಮಂಜ್ರೇಕರ್ ರವೀಂದ್ರ ಜಡೇಜಾ ಟ್ವೀಟ್​​ ನ್ಯೂಸ್​

ವೀಕ್ಷಕ ವಿವರಣೆಗಾರರಾಗಿರುವ ಸಂಜಯ್ ಮಂಜ್ರೇಕರ್ ಈಗ ಮತ್ತೊಮ್ಮೆ ಪರೋಕ್ಷವಾಗಿ ಟ್ವೀಟ್​​​ ಮೂಲಕ ರವೀಂದ್ರ ಜಡೇಜಾ ಅವರ ಕಾಲೆಳೆದಿದ್ದಾರೆ

ಜಡ್ಡು- ಮಂಜ್ರೇಕರ್​ ಟ್ವೀಟ್​ ವಾರ್
Ravindra Jadeja takes a dig at Sanjay Manjrekar

By

Published : Jan 27, 2020, 5:06 PM IST

ಹೈದರಾಬಾದ್​: ಇವರಿಬ್ಬರ ಟ್ವೀಟ್​ ವಾರ್​ ಇಂದು ನಿನ್ನೆಯದಲ್ಲ. 2019ರ ವಿಶ್ವಕಪ್​ ಟೂರ್ನಿಯಿಂದಲೇ ಈ ಟ್ವೀಟ್​ ವಾರ್​ ಆರಂಭವಾಗಿದೆ. ಇತ್ತೀಚಿನ ದಿನಗಳಲ್ಲಿ ಇವರ ವಾರ್​ ತಣ್ಣಗಾಗಿದೆ ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೆ ಕ್ರಿಕೆಟಿಗ ರವೀಂದ್ರ ಜಡೇಜಾ ಮತ್ತು ವೀಕ್ಷಕ ವಿವರಣೆಗಾರ ಸಂಜಯ್​ ಮಂಜ್ರೇಕರ್​ ನಡುವೆ ಟ್ವೀಟ್​ ವಾರ್​ ಆರಂಭವಾಗಿದೆ.

ವೀಕ್ಷಕ ವಿವರಣೆಗಾರರಾಗಿರುವ ಸಂಜಯ್ ಮಂಜ್ರೇಕರ್ ಈಗ ಮತ್ತೊಮ್ಮೆ ಪರೋಕ್ಷವಾಗಿ ಟ್ವೀಟ್​​​ ಮೂಲಕ ರವೀಂದ್ರ ಜಡೇಜಾ ಅವರ ಕಾಲೆಳೆದಿದ್ದಾರೆ. ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಎರಡನೇ ಟಿ-20 ಪಂದ್ಯದ ನಂತರ ಟ್ವೀಟ್ ಮಾಡಿರುವ ಮಂಜ್ರೇಕರ್, ಈ ಪಂದ್ಯದ 'ಮ್ಯಾನ್ ಆಫ್ ದಿ ಮ್ಯಾಚ್' ಪ್ರಶಸ್ತಿಯನ್ನು ರಾಹುಲ್ ಬದಲಿಗೆ ಓರ್ವ ಬೌಲರ್​​ಗೆ ನೀಡಬೇಕಿತ್ತು ಎಂದು ಟ್ವೀಟ್ ಮಾಡಿದ್ದರು.

ಮಂಜ್ರೇಕರ್ ಅವರ ಈ ಟ್ವೀಟ್​​ಗೆ ರೀ ಟ್ವೀಟ್​ ಮಾಡಿರುವ ಜಡ್ಡು, ಈ ಪ್ರಶಸ್ತಿ ಯಾರಿಗೆ ಸಿಗಬೇಕಿತ್ತು....? ಆ ಬೌಲರ್ ಹೆಸರೇನು....? ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ಮಂಜ್ರೇಕರ್ ಅವರಿಗೆ ಒತ್ತಾಯಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿರುವ ಮಂಜ್ರೇಕರ್ ಸ್ಪಷ್ಟವಾಗಿ ಹೇಳದೆ, 'ಹಾ ಹಾ .. ನೀವು ಅಥವಾ ಬುಮ್ರಾ' ಎಂದು ಟ್ವೀಟ್​ ಮಾಡಿದ್ದಾರೆ.

ಎರಡನೇ ಟಿ-20 ಪಂದ್ಯದಲ್ಲಿ ರವೀಂದ್ರ ಜಡೇಜಾ ಮತ್ತು ಜಸ್ ಪ್ರೀತ್ ಬೂಮ್ರಾ ಉತ್ತಮ ಬೌಲಿಂಗ್​ ಮಾಡಿ ನ್ಯೂಜಿಲೆಂಡ್ ಬ್ಯಾಟ್ಸ್​ಮನ್​​​ಗಳನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದರು. ಈ ಪಂದ್ಯದಲ್ಲಿ 4 ಓವರ್ ಬೌಲ್​ ಮಾಡಿದ್ದ ಜಡೇಜಾ, ಕೇವಲ 18 ರನ್ ನೀಡಿ ಪ್ರಮುಖ ಎರಡು ವಿಕೆಟ್ ಪಡೆದು ಕೀವಿಸ್​ ತಂಡಕ್ಕೆ ಶಾಕ್​​ ನೀಡಿದ್ದರು. ಇನ್ನು ಬುಮ್ರಾ 4 ಓವರ್​ನಲ್ಲಿ 21 ರನ್ ನೀಡಿ 1 ವಿಕೆಟ್ ಪಡೆದಿದ್ದರು.

For All Latest Updates

TAGGED:

ABOUT THE AUTHOR

...view details