ಕರ್ನಾಟಕ

karnataka

ETV Bharat / sports

ಧೋನಿ, ಕೊಹ್ಲಿ ನಂತರ ವಿಶೇಷ ಗೌರವಕ್ಕೆ ಪಾತ್ರರಾದ ರವೀಂದ್ರ ಜಡೇಜಾ! - ಧೋನಿ ಮತ್ತು ಕೊಹ್ಲಿ ದಾಖಲೆಗೆ ಸೇರಿದ ಜಡೇಜಾ

2009 ರಲ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ರವೀಂದ್ರ ಜಡೇಜಾ ಕಳೆದ 11 ವರ್ಷಗಳಲ್ಲಿ ಭಾರತ ತಂಡ 50 ಟೆಸ್ಟ್​ 168 ಏಕದಿನ ಹಾಗೂ 50 ಟಿ-20 ಪಂದ್ಯಗಳನ್ನಾಡಿದ್ದಾರೆ. ಭಾರತ ತಂಡಕ್ಕೆ ಆಪತ್ಪಾಂಧವನಾಗಿರುವ ಅವರು ಟೆಸ್ಟ್​ನಲ್ಲಿ 1926 ರನ್​ ಹಾಗೂ 216 ವಿಕೆಟ್​, ಏಕದಿನ ಕ್ರಿಕೆಟ್​ನಲ್ಲಿ 2411 ರನ್ ಹಾಗೂ 188 ವಿಕೆಟ್​​ ಮತ್ತು ಟಿ-20 ಕ್ರಿಕೆಟ್​ನಲ್ಲಿ 217 ರನ್​ ಹಾಗೂ 39 ವಿಕೆಟ್​ ಪಡೆದಿದ್ದಾರೆ.

ರವೀಂದ್ರ ಜಡೇಜಾ
ರವೀಂದ್ರ ಜಡೇಜಾ

By

Published : Dec 30, 2020, 8:39 PM IST

ಮೆಲ್ಬೋರ್ನ್​: ಭಾರತ ತಂಡದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್​ ಆಡುವ ಮೂಲಕ ಭಾರತದ ಮೂರು ಮಾದರಿಯ ಕ್ರಿಕೆಟ್​ನಲ್ಲಿ 50 ಪಂದ್ಯಗಳನ್ನಾಡಿದ ಮೂರನೇ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

2009 ರಲ್ಲಿ ಶ್ರೀಲಂಕಾ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ರವೀಂದ್ರ ಜಡೇಜಾ ಕಳೆದ 11 ವರ್ಷಗಳಲ್ಲಿ ಭಾರತ ತಂಡ 50 ಟೆಸ್ಟ್​ 168 ಏಕದಿನ ಹಾಗೂ 50 ಟಿ-20 ಪಂದ್ಯಗಳನ್ನಾಡಿದ್ದಾರೆ. ಭಾರತ ತಂಡಕ್ಕೆ ಆಪತ್ಪಾಂಧವನಾಗಿರುವ ಅವರು ಟೆಸ್ಟ್​ನಲ್ಲಿ 1926 ರನ್​ ಹಾಗೂ 216 ವಿಕೆಟ್​, ಏಕದಿನ ಕ್ರಿಕೆಟ್​ನಲ್ಲಿ 2,411 ರನ್ ಹಾಗೂ 188 ವಿಕೆಟ್​​ ಮತ್ತು ಟಿ-20 ಕ್ರಿಕೆಟ್​ನಲ್ಲಿ 217 ರನ್​ ಹಾಗೂ 39 ವಿಕೆಟ್​ ಪಡೆದಿದ್ದಾರೆ.

ರವೀಂದ್ರ ಜಡೇಜಾ ಹೊರತುಪಡಿಸಿದರೆ ಭಾರತ ತಂಡದ ಮಾಜಿ ನಾಯಕ ಧೋನಿ ಹಾಗೂ ಹಾಲಿ ನಾಯಕ ವಿರಾಟ್​ ಕೊಹ್ಲಿ ಮಾತ್ರ ಮೂರು ಮಾದರಿಯ ಕ್ರಿಕೆಟ್​ನಲ್ಲಿ 50 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.

ಧೋನಿ 90 ಟೆಸ್ಟ್​, 350 ಏಕದಿನ ಹಾಗೂ 98 ಟಿ-20 ಟಿ20 ಪಂದ್ಯಗಳನ್ನಾಡಿದ್ದರೆ, ಕೊಹ್ಲಿ 87 ಟೆಸ್ಟ್​, 251 ಏಕದಿನ ಹಾಗೂ 85 ಟಿ-20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ.

ಇದನ್ನು ಓದಿ:ಮೆಲ್ಬೋರ್ನ್ ಪ್ರತಿಷ್ಠಿತ​ ಸೆಂಚುರಿ ಬೋರ್ಡ್​ನಲ್ಲಿ 2ನೇ ಬಾರಿ ರಾರಾಜಿಸಿದ ರಹಾನೆ

ABOUT THE AUTHOR

...view details