ಕರ್ನಾಟಕ

karnataka

ETV Bharat / sports

ರವಿಚಂದ್ರನ್​ ಅಶ್ವಿನ್​ ಭಾರತೀಯ ಕ್ರಿಕೆಟ್​ನ ದಂತಕಥೆ: ಹರಭಜನ್ ಸಿಂಗ್​ - ಇಂಡಿಯಾ ವರ್ಸಸ್ ಇಂಗ್ಲೆಂಡ್​

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಕ್ರಿಕೆಟ್​ನಲ್ಲಿ ಆರ್​. ಅಶ್ವಿನ್ ಅದ್ಭುತ ಪ್ರದರ್ಶನ ನೀಡುತ್ತಿದ್ದು, ಅವರನ್ನ ಟೀಂ ಇಂಡಿಯಾ ಮಾಜಿ ಆಫ್​ ಸ್ಪಿನ್ನರ್​ ಹರಭಜನ್​ ಸಿಂಗ್ ಹಾಡಿ ಹೊಗಳಿದ್ದಾರೆ.

Ravichandran Ashwin
Ravichandran Ashwin

By

Published : Feb 27, 2021, 8:53 PM IST

ಅಹಮದಾಬಾದ್​:ಇಂಗ್ಲೆಂಡ್ ವಿರುದ್ಧ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್​​ ಪಂದ್ಯದಲ್ಲಿ ರವಿಚಂದ್ರನ್​ ಅಶ್ವಿನ್ ಟೀಂ ಇಂಡಿಯಾ ಗೆಲುವಿನಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದು, ಇದರ ಜತೆಗೆ ವೇಗವಾಗಿ 400 ವಿಕೆಟ್​ ಪಡೆದುಕೊಂಡ ಹೊಸ ದಾಖಲೆ ನಿರ್ಮಾಣ ಮಾಡಿದ್ದಾರೆ. ಇದೇ ವಿಚಾರವಾಗಿ ಹರಭಜನ್ ಸಿಂಗ್ ಮಾತನಾಡಿದ್ದಾರೆ.

ಟೀಂ ಇಂಡಿಯಾದ ಅನಿಲ್ ಕುಂಬ್ಳೆ ಹಾಗೂ ಹರಭಜನ್​ ಸಿಂಗ್ ನಿವೃತ್ತಿ ಪಡೆದುಕೊಂಡ ಬಳಿಕ ಆರ್​. ಅಶ್ವಿನ್ ಆ ಜಾಗ ತುಂಬಿದ್ದು, ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹರ್ಭಜನ್ ಸಿಂಗ್​

ಟೆಸ್ಟ್​ ಕ್ರಿಕೆಟ್​ನಲ್ಲಿ 400 ವಿಕೆಟ್​ ಪಡೆದುಕೊಳ್ಳುವುದು ಅತಿದೊಡ್ಡ ಸಾಧನೆ. ಮಾನಸಿಕವಾಗಿ, ದೈಹಿಕವಾಗಿ ಇಲ್ಲಿ ಸದೃಢವಾಗಿರುವುದು ಅತಿ ಅವಶ್ಯ. ನಿಜಕ್ಕೂ ಆರ್​. ಅಶ್ವಿನ್​ ದಂತಕಥೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹರಭಜನ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಸರಾಸರಿ ವಿಕೆಟ್​ ದಾಖಲೆಯಲ್ಲಿ ಕುಂಬ್ಳೆ, ಹರ್ಭಜನ್ ಸಿಂಗ್​ಗಿಂತಲೂ ಮುಂದಿದ್ದಾರೆ ಅಶ್ವಿನ್

ಟೆಸ್ಟ್​ ಪಂದ್ಯಗಳಲ್ಲಿ ಭಾರತದ ಗೆಲುವಿಗೆ ಅನೇಕ ಸಲ ಅಶ್ವಿನ್​ ಕಾರಣವಾಗಿದ್ದು, ವಿರಾಟ್​ ಕೊಹ್ಲಿ ಅಶ್ವಿನ್​ ಅವರನ್ನ ದಂತಕಥೆ ಎಂದು ಕರೆದಿರುವುದು ನಿಜಕ್ಕೂ ತುಂಬಾ ಸಂತೋಷವಾಯಿತು ಎಂದಿದ್ದು, ಮುಂದಿನ ಸಲ ಅವರನ್ನ ಭೇಟಿಯಾದಾಗ ನಾನು ಹಾಗೇ ಕರೆಯುತ್ತೇನೆ ಎಂದಿದ್ದಾರೆ. ಅಶ್ವಿನ್​​ ಟೀಂ ಇಂಡಿಯಾ ತಂಡ ಸಮಯದಿಂದಲೂ ಚೆನ್ನಾಗಿ ಆಡುತ್ತಿದ್ದು, ಮುಂದಿನ ದಿನಗಳಲ್ಲೂ ಮುಂದುವರಿಸುತ್ತಾರೆ ಎಂದು ನಾನು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಅಶ್ವಿನ್ ಪ್ರಮುಖ ಬ್ಯಾಟ್ಸಮನ್​ಗಳ ವಿಕೆಟ್​ ಪಡೆದುಕೊಳ್ಳುವ ಜಾಣ್ಮೆ ಹೊಂದಿದ್ದು, ಡೇವಿಡ್ ವಾರ್ನರ್​ ಅವರನ್ನ ಟೆಸ್ಟ್​ ಪಂದ್ಯಗಳಲ್ಲಿ 10 ಸಲ ಔಟ್ ಮಾಡಿದ್ದಾರೆ. ಬಾರ್ಡರ್​-ಗವಾಸ್ಕರ್​ ಟ್ರೋಫಿಯಲ್ಲೂ ಸ್ಮಿತ್​ ಅವರಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ.

ABOUT THE AUTHOR

...view details