ಮುಂಬೈ: ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆ ಹುದ್ದೆಯಲ್ಲಿ ಮತ್ತೊಂದು ಅವಧಿಗೆ ಮುಂದುವರೆದಿರುವ ರವಿ ಶಾಸ್ತ್ರಿಗೆ ಈ ಬಾರಿ ಬಂಪರ್ ಹೊಡೆಯುವ ಲಕ್ಷಣಗಳಿವೆ.
ಹೌದು, ವಿಶ್ವಕ್ರಿಕೆಟ್ನಲ್ಲಿ ಮುಂಚೂಣಿಯಲ್ಲಿರುವ ಟೀಂ ಇಂಡಿಯಾ ಕೋಚ್ ಹುದ್ದೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಹುದ್ದೆಗಾಗಿ ಸಾಕಷ್ಟು ಅನುಭವಿ ಹಿರಿಯ ಆಟಗಾರರು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ, ರವಿ ಶಾಸ್ತ್ರಿ ಎಲ್ಲರನ್ನೂ ಹಿಂದಿಕ್ಕಿ ಹುದ್ದೆಯನ್ನು ಮತ್ತೆ ಅಲಂಕರಿಸಿದ್ದಾರೆ.
ಮೊದಲ ಅವಧಿಯಲ್ಲಿ ರವಿ ಶಾಸ್ತ್ರಿ ವಾರ್ಷಿಕವಾಗಿ ₹8 ಕೋಟಿ ಸಂಬಳ ಪಡೆಯುತ್ತಿದ್ದರು. ಆದರೆ ಎರಡನೇ ಅವಧಿಯಲ್ಲಿ ಶೇ.20ರಷ್ಟು ಏರಿಕೆಯಾಗಿದ್ದು, ಈ ಮೂಲಕ ₹9.5ರಿಂದ 10 ಕೋಟಿಯಷ್ಟು ಪಡೆಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಹೇಳಿವೆ.
ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಭರತ್ ಅರುಣ್ ಟೀಂ ಇಂಡಿಯಾದ ಫೀಲ್ಡಿಂಗ್ ಕೋಚ್ ಭರತ್ ಅರುಣ್ ಸಂಬಳ ಸಹ ಇದೇವ ವೇಳೆ ಏರಿಕೆ ಕಂಡಿದೆ. ಭರತ್ ಅರುಣ್ ₹3.5 ಕೋಟಿ ಪಡೆದರೆ, ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಸಂಬಳ ₹2.5 ಕೋಟಿಯಿಂದ ₹3 ಕೋಟಿ ಇರಲಿದೆ ಎಂದು ಮೂಲಗಳು ಹೇಳಿವೆ.
ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ರವಿ ಶಾಸ್ತ್ರಿ ಸೇರಿದಂತೆ ಸದ್ಯ ನಿಯುಕ್ತಿಗೊಂಡಿರುವ ಕೋಚ್ಗಳ ಮುಂದಿನ ಎರಡು ವರ್ಷದ ಅವಧಿಗೆ ಹುದ್ದೆ ನಿಭಾಯಿಸಲಿದ್ದಾರೆ.