ಕರ್ನಾಟಕ

karnataka

ETV Bharat / sports

'ರವಿಶಾಸ್ತ್ರಿ ಸರಿಯಾದ ಆಯ್ಕೆ': ಗಂಗೂಲಿ ಮಾತಿನ ಮರ್ಮವೇನು? - ಟೀಂ ಇಂಡಿಯಾ ಕೋಚ್​

ಟೀಂ ಇಂಡಿಯಾ ಕೋಚ್​ ಆಗಿ ರವಿಶಾಸ್ತ್ರಿ ಆಯ್ಕೆ ಮಾಡಿರುವುದು ಸರಿಯಾದ ನಿರ್ಧಾರ. ಆದರೆ ಅವರ ಮುಂದಿನ ಹಾದಿ ತುಂಬಾ ಕಠಿಣವಾಗಿದೆ ಎಂದು ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಹೇಳಿದ್ದಾರೆ.

ಗಂಗೂಲಿ, ವಿರಾಟ್​ ಕೊಹ್ಲಿ

By

Published : Oct 3, 2019, 4:12 PM IST

ಮುಂಬೈ: ಟೀಂ ಇಂಡಿಯಾ ಕ್ರಿಕೆಟ್​ನ ತರಬೇತುದಾರನಾಗಿ​ ಮತ್ತೊಂದು ಅವಧಿಗೆ ರವಿಶಾಸ್ತ್ರಿ ಆಯ್ಕೆಯಾಗಿದ್ದು, 2021ರ ಐಸಿಸಿ ಟಿ20 ವಿಶ್ವಕಪ್​​ವರೆಗೂ ಈ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಕೋಚ್​ ಆಯ್ಕೆ ವಿಷಯವಾಗಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಮಾತನಾಡಿದ್ದಾರೆ. ರವಿಶಾಸ್ತ್ರಿ ಕೋಚ್​ ಸ್ಥಾನಕ್ಕೆ ಸರಿಯಾದ ಆಯ್ಕೆ. ಈ ಸಲದ ಕೋಚ್​ ಹುದ್ದೆಗೆ ಹೇಳಿಕೊಳ್ಳುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರಲಿಲ್ಲ. ಹೀಗಾಗಿ ಅವರನ್ನೇ ಕೋಚ್​ ಆಗಿ ಆಯ್ಕೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಹೇಳಿದ್ರು.

ರವಿಶಾಸ್ತ್ರಿ

ರವಿಶಾಸ್ತ್ರಿ ಮುಂದೆ ಎರಡು ಮಹತ್ವದ ಜವಾಬ್ದಾರಿಗಳಿವೆ. 2020ರ ಐಸಿಸಿ ಟಿ-20 ವಿಶ್ವಕಪ್​ ಹಾಗೂ 2021ರಲ್ಲಿ ನಡೆಯುವ ಐಸಿಸಿ ಚಾಂಪಿಯನ್​ ಟೂರ್ನಿ. ಈ ಎರಡೂ ಟೂರ್ನಿಗಳಲ್ಲಿ ಭಾರತ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿ, ಕಪ್​ ಗೆಲ್ಲುವಂತೆ ಮಾಡಬೇಕು ಎಂದು ರವಿಶಾಸ್ತ್ರಿ ಅವರಿಗೆ ಕಿವಿಮಾತು ಹೇಳಿದ್ರು.

2016ರಲ್ಲಿ ಅನಿಲ್​ ಕುಂಬ್ಳೆ ಭಾರತ ತಂಡದ ಕೋಚ್​ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ರವಿಶಾಸ್ತ್ರಿ ಆ ಸ್ಥಾನ ತುಂಬಿದ್ದು ಎರಡನೇ ಅವಧಿಗೂ ಅವರನ್ನೇ ಕೋಚ್​ ಆಗಿ ಮುಂದುವರಿಸಲಾಗಿದೆ. ಶಾಸ್ತ್ರಿ ನೇತೃತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುತ್ತಿದ್ದು, ವಿದೇಶಗಳಲ್ಲಿ ನಡೆಯುವ ಸರಣಿಗಳಲ್ಲೂ ಗೆಲುವು ಸಾಧಿಸುತ್ತಿದೆ.

ABOUT THE AUTHOR

...view details