ಕರ್ನಾಟಕ

karnataka

ETV Bharat / sports

’’2020ರ ಐಪಿಎಲ್ ದೊಡ್ಡ ಪಾರ್ಟಿ ಇದ್ದಂತೆ’’: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಆರಂಭವಾಗಲಿರುವ ಐಪಿಎಲ್​ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

Ravi Shastri
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ

By

Published : Aug 19, 2020, 12:57 PM IST

ಮುಂಬೈ: ಈ ವರ್ಷದ ಮೊದಲಾರ್ಧದಲ್ಲಿ ಕೋವಿಡ್-19 ಅಕ್ಷರಶಃ ಜಗತ್ತನ್ನು ಸ್ಥಗಿತಗೊಳಿಸಿತ್ತು. ಈ ಕಾಲದಲ್ಲಿ ಯುಎಇನಲ್ಲಿ ಆರಂಭವಾಗಲಿರುವ ಐಪಿಎಲ್​ ಪ್ರತಿಯೊಬ್ಬರಿಗೂ ಅವಶ್ಯಕವಾಗಿದೆ ಎಂದು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.

ಕೋವಿಡ್-19ರ ಬಗ್ಗೆ ನಿಮಗೆ ತಿಳಿದಿದೆ. ಸುರಕ್ಷತೆ ಕಾರಣಗಳಿಂದಾಗಿ ಹೆಚ್ಚಿನ ಜನರು ತಮ್ಮ ಮನೆಗಳಿಂದ ಹೊರಬರಲು ಸಾಧ್ಯವಾಗದ ಸಮಯದಲ್ಲಿ ಐಪಿಎಲ್​ನ ಅಗತ್ಯವಿತ್ತು. 51 ದಿನಗಳ ಕಾಲ ನಡೆಯುವ ಈ ಟೂರ್ನಿ ಜನರಿಗೆ ಮನರಂಜನೆ ಒದಗಿಸಲಿದೆ ಎಂದು ರವಿಶಾಸ್ತ್ರಿ ಹೇಳಿದ್ದಾರೆ.

ಈಗಿನ ಪರಿಸ್ಥಿತಿ ಖಿನ್ನತೆಯನ್ನುಂಟು ಮಾಡಿದ್ದು, ಇದು ಅನಿರೀಕ್ಷಿತವಾಗಿದೆ. ಎರಡನೇ ಮಹಾಯುದ್ಧದ ನಂತರ ಜಗತ್ತು ಈ ರೀತಿಯ ಪರಿಸ್ಥಿತಿ ನೋಡಿರಲಿಲ್ಲ. ದೂರದರ್ಶನದಲ್ಲಿ ಸ್ವಲ್ಪ ಕ್ರೀಡಾ ಚಟುವಟಿಕೆಗಳನ್ನು ನೋಡುವುದರಿಂದ ಬಹಳಷ್ಟು ಜನರ ಉತ್ಸಾಹ ಹೆಚ್ಚಿಸುತ್ತದೆ. ಈ ಸಮಯದಲ್ಲಿ ಇದು ಹೆಚ್ಚು ಅಗತ್ಯವಾಗಿದೆ ಎಂದು ಐಪಿಎಲ್​ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೋವಿಡ್-19 ಕಾರಣದಿಂದಾಗಿ ಬಿಸಿಸಿಐ 2020ರ ಐಪಿಎಲ್​ ಟೂರ್ನಿಯನ್ನು ಯುಎಇನಲ್ಲಿ ಆಯೋಜನೆ ಮಾಡಿದ್ದು, ಸೆಪ್ಟೆಂಬರ್​ 19 ರಿಂದ ವಿಶ್ವದ ಶ್ರೀಮಂತ ಕ್ರಿಕೆಟ್ ಟೂರ್ನಿಗೆ ಚಾಲನೆ ದೊರೆಯಲಿದೆ.

ABOUT THE AUTHOR

...view details