ಮುಂಬೈ:ದೇಶದೆಲ್ಲೆಡೆ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ಭಾರತ ತಂಡದ ಕೋಚ್ ರವಿಶಾಸ್ತ್ರಿ ಮಾಜಿ ಕ್ರಿಕೆಟಿಗರಾದ ರೋಜರ್ ಬಿನ್ನಿ ಹಾಗೂ ಶಿವರಾಮಕೃಷ್ಣನ್ ಅವರನ್ನು ಬಿಯರ್ ಕುಡಿಯಲು ಪಾರ್ಟ್ನರ್ಗಳಾಗಿ ಆಯ್ಕೆ ಮಾಡಿಕೊಂಡಿದ್ದಾರೆ.
ಶಾಸ್ತ್ರಿ ಆರೆಂಜ್ ಝೋನ್ ಆಗಿರುವ ಆಲಿಬಾಗ್ನಲ್ಲಿ ತಮ್ಮ ಮನೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಕೇಂದ್ರ ಸರ್ಕಾರ ಗ್ರೀನ್ ಹಾಗೂ ಆರೆಂಜ್ ಝೋನ್ನಲ್ಲಿ ಮಧ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿದ್ದು, ತಾವೂ ಬಿಯರ್ ಕೊಂಡುಕೊಳ್ಳಲು ಮದ್ಯದಂಗಡಿಗೆ ಹೊರಡುವುದಾಗಿ ಭಾರತದ ಮಾಜಿ ಆಲ್ರೌಂಡರ್ ಸಂತಸ ವ್ಯಕ್ತಪಡಿಸಿದ್ದಾರೆ.