ಕರ್ನಾಟಕ

karnataka

ETV Bharat / sports

ಭಾರತ ಯುವ ಬೌಲರ್​ಗಳ ಪರಾಕ್ರಮ: 41 ರನ್​ಗಳಿಗೆ ಆಲೌಟ್​ ಆದ ಜಪಾನ್​ - ಭಾರತ-ಜಪಾನ್​

5 ನೇ ವಿಶ್ವಕಪ್​ ಮೇಲೆ ಕಣ್ಣಿಟ್ಟಿರುವ ಭಾರತ ಯುವಪಡೆ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 90 ರನ್​ಗಳಿಂದ ಗೆದ್ದು ಬೀಗಿತ್ತು. ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಭಾರತ ತಂಡ ಕೇವಲ 22.5 ಓವರ್​ಗಳಲ್ಲಿ ಜಪಾನ್​ ತಂಡವನ್ನು 41 ರನ್​ಗಳಿಗೆ ಆಲೌಟ್ ಮಾಡಿದೆ.

IND vs Japan
IND vs Japan

By

Published : Jan 21, 2020, 3:49 PM IST

ಬ್ಲೂಮ್‌ಫಾಂಟೈನ್:ಭಾರತ ಯುವ ವೇಗಿಗಳ ಮಾರಕ ಬೌಲಿಂಗ್​ ದಾಳಿಗೆ ನಲುಗಿದ ಕ್ರಿಕೆಟ್​​ ಶಿಶು ಜಪಾನ್​ ಕೇವಲ 41 ರನ್​ಗಳಿಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡಿದೆ.

5 ನೇ ವಿಶ್ವಕಪ್​ ಮೇಲೆ ಕಣ್ಣಿಟ್ಟಿರುವ ಭಾರತ ಯುವಪಡೆ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 90 ರನ್​ಗಳಿಂದ ಗೆದ್ದು ಬೀಗಿತ್ತು. ಮಂಗಳವಾರ ನಡೆದ ಎರಡನೇ ಪಂದ್ಯದಲ್ಲಿ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಭಾರತ ತಂಡ ಕೇವಲ 22.5 ಓವರ್​ಗಳಲ್ಲಿ ಜಪಾನ್​ ತಂಡವನ್ನು 41 ರನ್​ಗಳಿಗೆ ಆಲೌಟ್ ಮಾಡಿದೆ.

ಭಾರತದ ಪರ ಪ್ರಚಂಡ ಬೌಲಿಂಗ್ ದಾಳಿ ನಡೆಸಿದ ರವಿ ಬಿಶ್ನೋಯ್​ 8 ಓವರ್​ಗಳಲ್ಲಿ 3 ಮೇಡನ್​ ಮಾಡಿ ಕೇವಲ 5 ರನ್​ ನೀಡಿ 4 ವಿಕೆಟ್​ ಪಡೆದು ಮಿಂಚಿದರು. ಇವರಿಗೆ ಸಾಥ್​ ನೀಡಿದ ಕಾರ್ತಿಕ್​ ತ್ಯಾಗಿ 6 ಓವರ್​ಗಳಲ್ಲಿ 10 ರನ್​ ನೀಡಿ 3 ವಿಕೆಟ್​, ಆಕಾಶ್​ ಸಿಂಗ್​ 4.5 ಓವರ್​ಗಳಲ್ಲಿ 11 ರನ್​ ನೀಡಿ 2 ವಿಕೆಟ್​, ವಿದ್ಯಾದರ್ ಪಾಟೀಲ್​ 4 ಓವರ್​ಗಳಲ್ಲಿ ಒಂದು ಮೇಡನ್​ ಸಹಿತ 8 ರನ್​ ನೀಡಿ 1 ವಿಕೆಟ್​ ಪಡೆದರು.

ಜಪಾನ್​ ಪರ ಆರಂಭಿಕ ಶು ನಗುಚಿ 7 ರನ್​, ಕೆಂಟೊ ಒಟ ಡೊಬೆಲ್​ 7 ರನ್​ಗಳಿಸಿದ್ದೇ ಗರಿಷ್ಠ ರನ್. ಆಶ್ಚರ್ಯವೆಂದರೆ ಜಪಾನ್​ಗಳಿಸಿದ 41 ರನ್​ಗಳಲ್ಲಿ 19 ರನ್​ ಭಾರತದ ಬೌಲರ್​ಗಳು ನೀಡಿದ ಇತರೆ ರನ್​ಗಳ ಮೂಲಕ ಬಂದಿದೆ.

ಜಪಾನ್​ ಕೇವಲ 41 ರನ್​ಗಳಿಗೆ ಆಲೌಟ್​ ಆಗುವ ಮೂಲಕ ಅಂಡರ್​ 19 ವಿಶ್ವಕಪ್​ನಲ್ಲಿ 2ನೇ ಕನಿಷ್ಠ ಮೊತ್ತ, ಹಾಗೂ ಅಂಡರ್​ 19 ಕ್ರಿಕೆಟ್​ನಲ್ಲಿ 3ನೇ ಕನಿಷ್ಠ ಮೊತ್ತಕ್ಕೆ ಆಲೌಟ್​ ಆದ ತಂಡ ಎಂಬ ಬೇಡದ ದಾಖಲೆಗೆ ತುತ್ತಾಯಿತು.

ABOUT THE AUTHOR

...view details