ಲಂಡನ್:ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂಬರ್ 1ಸ್ಥಾನ ಹಾಗೂ ಏಕದಿನ ಬೌಲಿಂಗ್ನಲ್ಲಿ 3ನೇ ಸ್ಥಾನದಲ್ಲಿರುವ ರಶೀದ್ ಖಾನ್ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕಳಪೆ ಬೌಲಿಂಗ್ ಪ್ರದರ್ಶಿಸಿದ್ದಾರೆ. ಈ ಮೂಲಕ ವಿಶ್ವಕಪ್ನಲ್ಲಿ ಯಾವೊಬ್ಬ ಬೌಲರ್ ಕೂಡ ನಿರ್ಮಿಸದ ಕಳಪೆ ರೆಕಾರ್ಡ್ ಮಾಡಿಬಿಟ್ಟರು!
ವಿಶ್ವಕಪ್ ಇತಿಹಾಸದಲ್ಲೇ ದುಬಾರಿ ಬೌಲಿಂಗ್: ನಂ.1 ಖ್ಯಾತಿಯ ಬೌಲರ್ನಿಂದ ಕಳಪೆ ಪ್ರದರ್ಶನ! - ಕಳಪೆ ಬೌಲಿಂಗ್
ವಿಶ್ವಕಪ್ ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ಬಿಟ್ಟುಕೊಟ್ಟಿರುವ ಅಪಖ್ಯಾತಿಗೆ ವಿಶ್ವದ ನಂ.3 ಬೌಲರ್ ರಶೀದ್ ಖಾನ್ ತುತ್ತಾದ್ರು.
ರಾಶೀದ್ ಖಾನ್
ಅಫ್ಘಾನಿಸ್ತಾನದ ಮಾರಕ ಬೌಲರ್ ಎಂಬ ಖ್ಯಾತಿಗಳಿಸಿರುವ ರಶೀದ್ ಖಾನ್ ತಾವು ಎಸೆದ 9 ಓವರ್ಗಳಲ್ಲಿ ಬರೋಬ್ಬರಿ 110ರನ್ ಬಿಟ್ಟುಕೊಟ್ಟಿದ್ದಾರೆ. ಜತೆಗೆ ಯಾವುದೇ ವಿಕೆಟ್ ಪಡೆದುಕೊಳ್ಳದೇ ಇಂಥದ್ದೊಂದು ಅಪಖ್ಯಾತಿಗೆ ಪಾತ್ರರಾಗಿದ್ದಾರೆ. ತಮ್ಮ ಓವರ್ನಲ್ಲಿ ಬರೋಬ್ಬರಿ 11 ಸಿಕ್ಸರ್ ಬಿಟ್ಟುಕೊಟ್ಟಿದ್ದು, ಮಾರ್ಗನ್ 7ಸಿಕ್ಸರ್ ಸಿಡಿಸಿದ್ದಾರೆ. ಇದು ಏಕದಿನ ವಿಶ್ವಕಪ್ನಲ್ಲಿ ಬೌಲರ್ ಒಬ್ಬನಿಂದ ಹರಿದು ಬಂದಿರುವ ಅತೀ ಹೆಚ್ಚು ರನ್‌ಗಳಾಗಿವೆ.
ಇವರದ್ದು ವಿಶ್ವಕಪ್ನಲ್ಲಿ ದುಬಾರಿ ಬೌಲಿಂಗ್ ಪ್ರದರ್ಶನ!
- ರಶೀದ್ ಖಾನ್(ಆಫ್ಘಾನಿಸ್ತಾನ) 9 ಓವರ್ 110ರನ್
- ಮಾರ್ಟಿನ್ ಸ್ನೆಡೆನ್(ನ್ಯೂಜಿಲ್ಯಾಂಡ್) ಇಂಗ್ಲೆಂಡ್ ವಿರುದ್ಧ 105 ರನ್, 12 ಓವರ್
- ಜಾಸನ್ ಹೋಲ್ಡರ್(ವೆಸ್ಟ್ ಇಂಡೀಸ್) ದಕ್ಷಿಣ ಆಫ್ರಿಕಾ ವಿರುದ್ಧ 104 ರನ್,10 ಓವರ್
ಇವರು ಏಕದಿನದ ದುಬಾರಿ ಬೌಲರ್‌ಗಳು!
- ಮಿಚೆಲ್ ಲೆವಿಸ್ (ಆಸ್ಟ್ರೇಲಿಯಾ) 113 ರನ್ (10 ಓವರ್), ದ.ಆಫ್ರಿಕಾ,2006
- ವಹಾಬ್ ರಿಯಾಜ್ (ಪಾಕಿಸ್ತಾನ): 110 ರನ್ (10 ಓವರ್), ಇಂಗ್ಲೆಂಡ್, 2016
- ರಶೀದ್ ಖಾನ್ (ಅಫ್ಘಾನಿಸ್ತಾನ): 110 ರನ್ (9 ಓವರ್), ಇಂಗ್ಲೆಂಡ್, 2019
- ಭುವನೇಶ್ವರ್ ಕುಮಾರ್ (ಭಾರತ): 106 ರನ್ (10 ಓವರ್),ದ.ಆಫ್ರಿಕಾ, 2015
- ನುವಾನ್ ಪ್ರದೀಪ್ (ಶ್ರೀಲಂಕಾ): 106 ರನ್ (10 ಓವರ್), ಭಾರತ, 2017
Last Updated : Jun 18, 2019, 10:03 PM IST