ಸಿಡ್ನಿ: ಅಫ್ಘಾನಿಸ್ತಾನ ಸ್ಟಾರ್ ಬೌಲರ್ ರಶೀದ್ ಖಾನ್ ಬಿಗ್ಬ್ಯಾಶ್ನಲ್ಲಿ ಅತ್ಯದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು ಸಿಡ್ನಿ ಸಿಕ್ಸರ್ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ.
ಅಡಿಲೇಡ್ ಸ್ಟೈಕರ್ಸ್ ತಂಡದ ಪರ ಆಡುತ್ತಿರುವ ರಶೀದ್ ಸಿಡ್ನಿ ಸಿಕ್ಸರ್ ವಿರುದ್ಧ ಹ್ಯಾಟ್ರಿಕ್ ಸಾಧಿಸಿ ಸೋಲಿನತ್ತ ಸಾಗುತ್ತಿದ್ದ ಪಂದ್ಯವನ್ನು ಮತ್ತೆ ರೋಚಕ ಹಂತಕ್ಕೆ ತಂದು ನಿಲ್ಲಿಸಿದ್ದರು. ಆದರೆ ಬೇರೆ ಬೌಲರ್ಗಳ ಕಳಪೆ ಪ್ರದರ್ಶನದಿಂದ ಅಡಿಲೇಡ್ 2 ವಿಕೆಟ್ಗಳಿಂದ ಸೋಲೊಪ್ಪಿಕೊಂಡಿತು.
ರಶೀದ್ ಖಾನ್ ತಮ್ಮಮೂರನೇ ಓವರ್ನ ಕೊನೆಯ 2 ಎಸೆತದಲ್ಲಿ ಜೇಮ್ಸ್ ವಿನ್ಸ್ ಹಾಗೂ ಜಾಕ್ ಎಡ್ವರ್ಡ್ಸ್ ರನ್ನು ಪೆವಿಲಿಯನ್ಗಟ್ಟಿದರೆ, ತಮ್ಮ ನಾಲ್ಕನೇ ಓವರ್ನ ಮೊದಲ ಎಸೆತದಲ್ಲಿ ಜೋರ್ಡನ್ ಸಿಲ್ಕ್ ವಿಕೆಟ್ ಪಡೆಯುವ ಮೂಲಕ ಟಿ20 ಕ್ರಿಕೆಟ್ನಲ್ಲಿ ತಮ್ಮ ಮೂರನೇ ಹ್ಯಾಟ್ರಿಕ್ ಪಡೆದರು.
ಈ ಪಂದ್ಯದಲ್ಲಿ ಅಡಿಲೇಡ್ 135 ರನ್ಗಳಿಸಿತ್ತು. ಇದಕ್ಕುತ್ತರವಾಗಿ ಸಿಡ್ನಿ ಸಿಕ್ಸರ್ 18.4 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. 11ಎಸೆತಗಳಲ್ಲಿ 11ರನ್ ಬೇಕಿದ್ದ ಸಂದರ್ಭದಲ್ಲಿ ಪೀಟರ್ ಸಿಡ್ಲ್ ಓವರ್ನಲ್ಲಿ ಹ್ಯಾಟ್ರಿಕ್ ಬೌಂಡರಿ ಸಿಡಿಸಿದ ಹೆಜಲ್ವುಡ್ ಅಡಿಲೇಡ್ ಗೆಲುವಿನ ಕನಸನ್ನು ನುಚ್ಚುನೂರು ಮಾಡಿದರು.