ಕರ್ನಾಟಕ

karnataka

ETV Bharat / sports

ಧೋನಿ ಕಾರಣಕ್ಕೆ ಜಾಹೀರಾತಲ್ಲಿ ಕೆಲಸಕ್ಕೆ ಸೇರಿಕೊಂಡಿದ್ರಂತೆ ಈ ಬಾಲಿವುಡ್​ ನಟ - MS Dhoni retirement

'ಧೋನಿ ತುಂಬಾ ವಿನಮ್ರ ಗುಣದ ವ್ಯಕ್ತಿ. ಅವರಿಗೆ ತುಂಬಾ ತಾಳ್ಮೆಯೂ ಇತ್ತು. ಆತ ನಿಸ್ಸಂದೇಹವಾಗಿ ಒಬ್ಬ ದಯೆ, ಕರುಣೆಯುಳ್ಳವನಾಗಿದ್ದಾನೆ ಅನ್ನೋದು ನನಗೆ ತಿಳಿಯಿತು. ಆ ನಂತರ ಅವರ ಮೇಲಿನ ನನ್ನ ಪ್ರೀತಿ, ಗೌರವ ಮತ್ತಷ್ಟು ಹೆಚ್ಚಾಯಿತು'- ರಣವೀರ್ ಸಿಂಗ್

ಧೋನಿ -ರಣವೀರ್​ ಸಿಂಗ್​
ಧೋನಿ -ರಣವೀರ್​ ಸಿಂಗ್​

By

Published : Aug 16, 2020, 6:43 PM IST

Updated : Aug 16, 2020, 7:18 PM IST

ಮುಂಬೈ:ಧೋನಿಯವರ ಅಭಿಮಾನಿಗಳಲ್ಲಿ ಒಬ್ಬರಾಗಿರುವ ಬಾಲಿವುಡ್​ ನಟ ರಣವೀರ್ ಸಿಂಗ್​ ಧೋನಿ ಬಗೆಗಿನ ತಮ್ಮ ಅಭಿಮಾನ ಹೇಗಿತ್ತು? ಎಂಬುದನ್ನು ಭಾವಾನಾತ್ಮಕ ಬರಹದ ಮೂಲಕ ಹಂಚಿಕೊಂಡಿದ್ದಾರೆ.

'ಈ ಫೋಟೋ ನನ್ನ ಅಮೂಲ್ಯ ಆಸ್ತಿ. ಇದನ್ನು 2007/08ರಲ್ಲಿ ಕಾರ್ಜತ್​ನ ಎನ್​ಡಿ ಸ್ಟುಡಿಯೋದಲ್ಲಿ ತೆಗಿಸಲಾಗಿತ್ತು. ನನಗೆ ಆಗ 22 ವರ್ಷ ವಯಸ್ಸು. ಧೋನಿ ಜಾಹೀರಾತು ಶೂಟಿಂಗ್​ನಲ್ಲಿ ನಟಿಸುತ್ತಿದ್ದಾರೆ ಎಂಬ ಒಂದೇ ಕಾರಣಕ್ಕೆ ನಾನು ಅಸಿಸ್ಟೆಂಟ್​ ಡೈರೆಕ್ಟರ್​ ಆಗಿ ಕೆಲಸಕ್ಕೆ ಒಪ್ಪಿಕೊಂಡಿದ್ದೆ. ಆ ಸಂದರ್ಭದಲ್ಲಿ ಕಡಿಮೆ ವೇತನಕ್ಕೆ ಹೆಚ್ಚು ಕೆಲಸ ಮಾಡುತ್ತಿದ್ದೆ. ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಧೋನಿ ಸಮ್ಮುಖದಲ್ಲಿರಲು ಬಯಸಿದ್ದೆ ಅಷ್ಟೇ. ಆ ಸಂದರ್ಭದಲ್ಲಿ ನನಗೆ ಗಾಯ ಕೂಡ ಆಗಿತ್ತು. ಆದರೆ ಧೋನಿಯನ್ನು ಬೇಟಿಯಾಗುವ ಹಾಗೂ ಫೋಟೋ ತೆಗೆಸಿಕೊಳ್ಳುವ ಅವಕಾಶ ಸಿಗುತ್ತದೆ ಎಂಬ ಕಾರಣಕ್ಕೆ ನಾನು ನೋವಿನಲ್ಲೂ ಪ್ರಮಾಣಿಕವಾಗಿ ಕೆಲಸ ಮಾಡಿದ್ದೆ' ಎಂದು ರಣವೀರ್ ಸಿಂಗ್ ಹೇಳಿದ್ದಾರೆ.

ಧೋನಿ -ರಣವೀರ್​ ಸಿಂಗ್​

ಧೋನಿ ತುಂಬಾ ವಿನಮ್ರರಾಗಿದ್ದರು. ಅವರಿಗೆ ತುಂಬಾ ತಾಳ್ಮೆಯೂ ಇತ್ತು. ಅವರು ನಿಸ್ಸಂದೇಹವಾಗಿ ಒಬ್ಬ ದಯೆ, ಕರುಣೆಯುಳ್ಳ ವ್ಯಕ್ತಿ ಎಂಬುದು ನನಗೆ ತಿಳಿಯಿತು. ಆ ನಂತರ ಅವರ ಮೇಲಿನ ನನ್ನ ಪ್ರೀತಿ, ಗೌರವ ಮತ್ತಷ್ಟು ಹೆಚ್ಚಾಯಿತು ಎಂದು ರಣವೀರ್ ಸಿಂಗ್ ಹೇಳುತ್ತಾರೆ.

ರಣವೀರ್​ ಸಿಂಗ್​ ಪೋಸ್ಟ್​

ಧೋನಿ ನನ್ನ ಟೋಪಿ ಮತ್ತು ಜರ್ಸಿಗೆ ಸಹಿ ಮಾಡಿದ್ದರು. ಆ ಸಂದರ್ಭದಲ್ಲಿ ಎಲ್ಲಾ ಅಭಿಮಾನಿಗಳಂತೆ ನಾನು ಆ ದಿನ ಮೋಡಗಳ ಮೇಲೆ ನಡೆಯುತ್ತಿದ್ದೇವೆ ಎಂದು ಅನ್ನಿಸಿತು. ಅಂದಿನಿಂದ ನಾನು ಅವರನ್ನು ಬೇಟಿಯಾಗುವಂತಹ ಪ್ರತಿ ಅವಕಾಶದಲ್ಲೂ ಬಹಳ ಉತ್ಸಾಹಭರಿತನಾಗಿರುತ್ತೇನೆ. ಆತ ನನಗೆ ಸಿಕ್ಕಿರುವ ಹಿರಿಯ ಸಹೋದರ ಇದ್ದಂತೆ ಎಂದಿದ್ದಾರೆ.

ಧೋನಿ ಅವರನ್ನು ಮತ್ತಷ್ಟು ಹೊಗಳಿರುವ ರಣವೀರ್ ಹೀಗೆ 'ಎಂಎಸ್​ಡಿ ಶ್ರೇಷ್ಠ ಕ್ರೀಡಾಪಟುಗಳಲ್ಲಿ ಒಬ್ಬರು. ನನ್ನ ಜೀವಿತಾವಧಿಯಲ್ಲಿ ಅವರ ಸಂಪೂರ್ಣ ಆಟಕ್ಕೆ ಸಾಕ್ಷಿಯಾಗಿದ್ದಕ್ಕೆ ನಾನು ಅದೃಷ್ಟಶಾಲಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.

Last Updated : Aug 16, 2020, 7:18 PM IST

ABOUT THE AUTHOR

...view details