ಮುಂಬೈ: ರಣಜಿ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಂಪೈರ್ ತೀರ್ಪು ಪರಾಮರ್ಶೆ ಪದ್ಧತಿ(ಡಿಆರ್ಎಸ್) ಜಾರಿಗೆ ತರಲು ಬಿಸಿಸಿಐ ಗ್ರೀನ್ ಸಿಗ್ನಲ್ ನೀಡಿದೆ. ಆದರೆ ಅಲ್ಟ್ರಾ ಎಡ್ಜ್ ಹಾಗೂ ಬಾಲ್ ಟ್ರ್ಯಾಕಿಂಗ್ ಸೌಲಭ್ಯ ಮಾತ್ರ ಇರುವುದಿಲ್ಲ ಎಂದು ತಿಳಿಸಿದೆ.
ಕರ್ನಾಟಕ- ಬೆಂಗಾಲ್, ಗುಜರಾತ್-ಸೌರಾಷ್ಟ್ರಗಳ ನಡುವೆ ಶನಿವಾರದಿಂದ ನಡೆಯಲಿರುವ ರಣಜಿ ಸೆಮಿಫೈನಲ್ ಪಂದ್ಯಗಳಿಂದಲೇ ಡಿಆರ್ಎಸ್ ನಿಯಮ ಜಾರಿಗೆ ಬರಲಿದೆ.
ಒಂದೇ ಇನ್ನಿಂಗ್ಸ್ನಲ್ಲಿ ಎರಡು ತಂಡಗಳಿಗೂ ತಲಾ ಎರಡು ರಿವ್ಯೂ ತೆಗೆದುಕೊಳ್ಳುವ ಅವಕಾಶವನ್ನು ಅಂತಾರಾಷ್ಟ್ರೀಯ ಟೆಸ್ಟ್ನಲ್ಲಿ ನೀಡಲಾಗಿದೆ. ಆದರೆ ರಣಜಿಯಲ್ಲಿ 4 ರಿವ್ಯೂ ತೆಗೆದುಕೊಳ್ಳುವ ಅವಕಾಶ ನೀಡಲಾಗಿದೆ. ರಿವ್ಯೂ ಯಶಸ್ವಿಯಾದರೆ ಮತ್ತೆ ಬಳಸಿಕೊಳ್ಳಬಹುದಾಗಿದೆ.