ಕರ್ನಾಟಕ

karnataka

ETV Bharat / sports

ಶಿವಮೊಗ್ಗದಲ್ಲಿ ರಣಜಿ ಪಂದ್ಯ: ಟಾಸ್​ ಸೋತ ಕರ್ನಾಟಕ, ಬ್ಯಾಟಿಂಗ್​ನಲ್ಲಿ ಆರಂಭಿಕ ಆಘಾತ - Cricket Match In Shivamogga

ಶಿವಮೊಗ್ಗ ನಗರದ ಹೊರವಲಯದಲ್ಲಿರುವ ನವಲೆಯ ಕೆಎಸ್​ಸಿಎ ಮೈದಾನದಲ್ಲಿ ಇಂದಿನಿಂದ ಕರ್ನಾಟಕ ಹಾಗೂ ಮಧ್ಯ ಪ್ರದೇಶ ತಂಡಗಳ ನಡುವಿನ ರಣಜಿ ಪಂದ್ಯ ಆರಂಭವಾಗಿದೆ.

ranji-trophy-karnataka-vs-mp-match
ರಣಜಿ, ಟಾಸ್​ ಸೋತ ಕರ್ನಾಟಕ ಬ್ಯಾಟಿಂಗ್​, ಆರಂಭಿಕ ಆಘಾತ..!

By

Published : Feb 4, 2020, 12:08 PM IST

ಶಿವಮೊಗ್ಗ: ನಗರದ ಹೊರವಲಯದಲ್ಲಿರುವ ನವಲೆಯ ಕೆಎಸ್​ಸಿಎ ಮೈದಾನದಲ್ಲಿ ಇಂದಿನಿಂದ ಕರ್ನಾಟಕ ಹಾಗೂ ಮಧ್ಯ ಪ್ರದೇಶ ತಂಡಗಳ ನಡುವಿನ ರಣಜಿ ಪಂದ್ಯ ಆರಂಭವಾಗಿದೆ.

ಟಾಸ್ ಸೊತು ಬ್ಯಾಟಿಂಗ್​ಗೆ ಇಳಿದ ಕರ್ನಾಟಕ ತಂಡ ಆರಂಭಿಕ ಆಘಾತ ಅನುಭವಿಸಿದೆ. ಭರವಸೆಯ ಆಟಗಾರ ದೇವದತ್​ ಪಡಿಕಲ್ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಅನುಭವಿಸಿದರು. ನಂತರ ಬಂದ ರೋಹನ್ ಕದಂ ಕೂಡ 9 ರನ್ ಗಳಿಸಿ ಪೆವಿಲಿಯನ್​ಗೆ ಹಿಂದಿರುಗಿದರು. ಆದರೂ 15 ನೇ ಓವರ್​ ಮುಕ್ತಾಯದ ವೇಳೆಗೆ ಕರ್ನಾಟಕ ತಂಡ ಎರಡು ವಿಕೆಟ್ ನಷ್ಟಕ್ಕೆ 34 ರನ್ ಗಳಿಸಿದೆ. ಕ್ರಿಸ್​ನಲ್ಲಿ ಸಮರ್ಥ ಹಾಗೂ ನಾಯಕ ಕರುಣ್ ನಾಯರ್ ಇದ್ದಾರೆ.

ರಣಜಿ ಪಂದ್ಯ: ಟಾಸ್​ ಸೋತು ಬ್ಯಾಟಿಂಗ್​ ಆಯ್ದುಕೊಂಡ ಕರ್ನಾಟಕಕ್ಕೆ ಆರಂಭಿಕ ಆಘಾತ

ಇದಕ್ಕೂ ಮುನ್ನ ಪಂದ್ಯಕ್ಕೆ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಗಂಟೆ ಬಾರಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಕೆಎಸ್​ಸಿಎ ಅಧ್ಯಕ್ಷ ರೋಜರ್ ಬಿನ್ನಿ, ಶಿವಮೊಗ್ಗ ಕ್ರಿಕೆಟ್ ವಲಯದ ಸಂಚಾಲಕ ಡಿ.ಎಸ್. ಅರುಣ್, ಅಧ್ಯಕ್ಷ ರಾಜೇಂದ್ರ ಕಾಮತ್, ಎಸ್ಪಿ ಶಾಂತರಾಜು ಸೇರಿದಂತೆ ಇತರರು ಹಾಜರಿದ್ದರು.


ABOUT THE AUTHOR

...view details