ಬೆಂಗಳೂರು: ಈಗಾಗಲೇ ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿ ಹಾಗೂ ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಪಟ್ಟ ಅಲಂಕರಿಸಿರುವ ಕರ್ನಾಟಕ ತಂಡ ರಣಜಿ ಟ್ರೋಫಿ ಮೇಲೆ ಕಣ್ಣು ನೆಟ್ಟಿದ್ದು, 15 ಸದಸ್ಯರನ್ನೊಳಗೊಂಡ ರಾಜ್ಯ ಕ್ರಿಕೆಟ್ ಸಂಸ್ಥೆ ತಮಿಳುನಾಡು ವಿರುದ್ಧದ ಪಂದ್ಯದಕ್ಕಾಗಿ ಬಲಿಷ್ಟ ತಂಡ ಪ್ರಕಟಗೊಳಿಸಿದೆ.
ತಂಡದಲ್ಲಿ ಯುವ ಹಾಗೂ ಅನುಭವಿ ಆಟಗಾರರ ದಂಡೇ ಇದೆ. ಸೈಯದ್ ಮುಷ್ತಾಕ್ ಅಲಿ ಟಿ-20 ಟೂರ್ನಿ ಹಾಗೂ ವಿಜಯ್ ಹಜಾರೆಯಲ್ಲಿ ಅಮೋಘ ಪ್ರದರ್ಶನವನ್ನು ನೀಡಿದ ಆಟಗಾರರಿಗೆ ಮಣೆ ಹಾಕಲಾಗಿದೆ. ಸಂಭಾವ್ಯ ಪಟ್ಟಿಯಲ್ಲಿ ಇಬ್ಬರು ವಿಕೆಟ್ ಕೀಪರ್ಗಳಿಗೆ ಅವಕಾಶ ನೀಡಲಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಷಿಯೇಷನ್ ಇಂದು ತಂಡ ಪ್ರಕಟಗೊಳಿಸಿದ್ದು, ಮೊದಲ ಪಂದ್ಯದಲ್ಲಿ ತಮಿಳುನಾಡು ವಿರುದ್ಧ ಸೆಣಸಾಟ ನಡೆಸಲಿದೆ. ಪಂದ್ಯ ಡಿಸೆಂಬರ್ 9ರಿಂದ 12ರವರೆಗೆ ನಡೆಯಲಿದೆ.
W,W,W,W,wd,1,W.. ಒಂದೇ ಓವರ್ನಲ್ಲಿ ಹ್ಯಾಟ್ರಿಕ್ ಸೇರಿ 5 ವಿಕೆಟ್ ಕಿತ್ತು ಮಲಿಂಗಾ ದಾಖಲೆ ಬ್ರೇಕ್ ಮಾಡಿದ ಮಿಥುನ್!
ತಂಡ ಇಂತಿದೆ:ಕರುಣ್ ನಾಯರ್(ಕ್ಯಾಪ್ಟನ್), ಮಯಾಂಕ್ ಅಗರವಾಲ್, ದೇವದತ್ತ್ ಪಡಿಕ್ಕಲ್,ನಿಶಿತ್ ಡಿ, ಸಮರ್ಥ್ ಆರ್, ಪವನ್ ದೇಶಪಾಂಡೆ,ಕೆ.ಗೌತಮ್, ಶ್ರೇಯಸ್ ಗೋಪಾಲ್(ಉಪನಾಯಕ), ಸುಚಿತ್.ಜಿ, ಶರತ್ ಬಿಆರ್(ವಿ.ಕೀ), ಶರತ್ ಶ್ರೀನಿವಾಸ್(ವಿ.ಕೀ), ರೋನಿತ್ ಮೊರೆ, ಡೇವಿಡ್ ಮ್ಯಾಥೂಸ್,ಕೌಶಿಕ್ ವಿ, ಹಾಗೂ ಕೆಎಸ್ ದೇವಿಯಾ
19 ವರ್ಷದೊಳಗಿನ ಭಾರತ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರುವ ಶುಭಾಂಗ್ ಹೆಗ್ಡೆ ಹಾಗೂ ವಿದ್ಯಾಧರ್ ಪಾಟೀಲ್ ಸಂಭಾವ್ಯ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಅವರನ್ನ ತಂಡಕ್ಕೆ ಸೇರಿಸಿಕೊಂಡಿಲ್ಲ.ರಣಜಿ ಟ್ರೋಫಿಗಾಗಿ ಕರ್ನಾಟಕದ 30 ಆಟಗಾರರ ಸಂಭಾವ್ಯ ತಂಡವನ್ನ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕಳೆದ ಮಂಗಳವಾರ ಪ್ರಕಟಿಸಿತ್ತು. ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿ ಸೆಮಿಫೈನಲ್ ಪಂದ್ಯದಲ್ಲಿ ಒಂದೇ ಓವರ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಸೇರಿ 5ವಿಕೆಟ್ ಪಡೆದುಕೊಂಡಿದ್ದ ಅಭಿಮನ್ಯು ಮಿಥುನ್ಗೆ ಅವಕಾಶ ಸಿಕ್ಕಿಲ್ಲ.