ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ ಬ್ಯಾಟ್ಸ್ಮನ್ ರಮೀಜ್ ಶಹ್ಜಾದ್ ಸ್ಕಾಟ್ಲೆಂಡ್ ವಿರುದ್ಧ ಹಿಡಿದ ಅದ್ಭುತ ಕ್ಯಾಚ್ಗೆ ಕ್ರಿಕೆಟ್ ಅಭಿಮಾನಿಳು ಫಿದಾ ಆಗಿದ್ದು, ಯುಎಇ ಆಟಗಾರನಿಗೆ ಶಹಬ್ಬಾಶ್ಗಿರಿ ನೀಡಿದ್ದಾರೆ.
ವಿಶ್ವಕಪ್ನಲ್ಲಿ ಬೆನ್ಸ್ಟೋಕ್ಸ್ ದಕ್ಷಿಣ ಆಫ್ರಿಕಾದ ಪೆಹ್ಲುಕ್ವಾಯೋ ಅವರ ಬೌಂಡರಿಯತ್ತ ಬಾರಿಸಿದ್ದ ಚೆಂಡನ್ನು ಮೇಲಕ್ಕೆ ಜಿಗಿದು ಒಂದೇ ಕೈಯಲ್ಲಿ ಹಿಡಿದಿದ್ದ ಕ್ಯಾಚ್ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಕ್ಯಾಚ್ ಎಂದು ಬಣ್ಣಿಸಲಾಗಿತ್ತು. ಇದರ ಅನುಕರಣೆಯಂತೆ ರಮೀಜ್ ಕೂಡ ಸ್ಕಾಟ್ಲೆಂಡ್ನ ಜಾರ್ಜ್ ಮುನ್ಸೆ ಬಾರಿಸಿದ ಚೆಂಡನ್ನು ಒಂದೇ ಕೈಯಲ್ಲಿ ಹಿಡಿದಿದ್ದಾರೆ