ದುಬೈ:ಕನ್ನಡಿಗ ಮನೀಶ್ ಪಾಂಡೆ ಹಾಗೂ ನಾಯಕ ಡೇವಿಡ್ ವಾರ್ನರ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಹೊರೆತಾಗಿಯೂ ಸನ್ರೈಸರ್ಸ್ ಹೈದರಾಬಾದ್ ತಂಡ 20 ಓವರ್ಗಳಲ್ಲಿ 158 ರನ್ಗಳಿಸಿದೆ.
ಟಾಸ್ ಗೆದ್ದ ಹೈದರಾಬಾದ್ ತಂಡ ನಿಧಾನಗತಿ ಆಟಕ್ಕೆ ಮೊರೆ ಹೋಯಿತು. ಕಳೆದ ಪಂದ್ಯದಲ್ಲಿ 97 ರನ್ಗಳಿಸಿದ್ದ ಬೈರ್ಸ್ಟೋವ್ ಇಂದು 19 ಎಸೆತಗಳಲ್ಲಿ 16 ರನ್ಗಳಿಸಿ ಔಟಾದರು.
ಆದರೆ 2ನೇ ವಿಕೆಟ್ ಜೊತೆಯಾಟದಲ್ಲಿ ಒಂದಾದ ವಾರ್ನರ್ ಹಾಗೂ ಪಾಂಡೆ 73 ರನ್ ಸೇರಿಸಿ ತಂಡದಕ್ಕೆ ಚೇತರಿಕೆ ನೀಡಿದರು. ಆದರೆ ಈ ಜೋಡಿ ವಿಕೆಟ್ ಉಳಿಸಿಕೊಳ್ಳಲು ಹೋಗಿ ನಿಧಾನಗತಿ ಆಟಕ್ಕೆ ಮೊರೆ ಹೋಗಿದ್ದರಿಂದ ರನ್ರೇಟ್ ಪ್ರಮಾಣ ಕುಸಿಯಿತು.