ಮುಂಬೈ: ಭಾರತ ತಂಡದ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ರಾಹುಲ್ ದ್ರಾವಿಡ್ ಚೊಚ್ಚಲ ಟಿ20 ವಿಶ್ರಕಪ್ನಲ್ಲಿ ಪಾಲ್ಗೊಳ್ಳದಿರುವುದಕ್ಕೆ ಕನ್ನಡಿಗ ರಾಹುಲ್ ದ್ರಾವಿಡ್ ಕಾರಣ ಎಂದು ಭಾರತ ತಂಡದ ಮಾಜಿ ಆಟಗಾರ ಲಾಲ್‌ಚಂದ್ ರಜಪೂತ್ ಬಹಿರಂಗಪಡಿಸಿದ್ದಾರೆ.
ಖಾಸಗಿ ಕ್ರೀಡಾವೆಬ್ಸೈಟ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು , ದ್ರಾವಿಡ್ , ಯುವ ಆಟಗಾರರಾದ ರೋಹಿತ್ ಶರ್ಮಾ, ರಾಬಿನ್ ಉತ್ತಪ್ಪ ಯೂಸುಫ್ ಪಠಾಣ್ ಅವರಂತಹ ಆಟಗಾರರಿಗೆ ಅವಕಾಶ ಒದಗಿಸಿಕೊಡುವ ಸಲುವಾಗಿ ಗಂಗೂಲಿ ಮತ್ತು ಸಚಿನ್ರಿಗೆ ಚುಟುಕು ವಿಶ್ವಕಪ್ನಲ್ಲಿ ಆಡದಿರುವಂತೆ ಮನವಿ ಮಾಡಿದ್ದರು ಎಂದು ರಜಪೂತ್ ವಿವರಿಸಿದ್ದಾರೆ.