ಮುಂಬೈ: ರಾಜಸ್ಥಾನ ರಾಯಲ್ಸ್ ಪರ 2020ರ ಐಪಿಎಲ್ ಆವೃತ್ತಿಯಲ್ಲಿ ಆಡಿದ್ದ ಕನ್ನಡಿಗ ರಾಬಿನ್ ಉತ್ತಪ್ಪರನ್ನು ಚೆನ್ನೈ ಸೂಪರ್ ಕಿಂಗ್ಸ್ ಕ್ಯಾಷ್ ಡೀಲ್ ಮೂಲಕ ಖರೀದಿಸಿದೆ.
ಕೆಕೆಆರ್ ತಂಡ ಕೈಬಿಟ್ಟ ಮೇಲೆ 2019ರ ಹರಾಜಿನಲ್ಲಿ ರಾಬಿನ್ ಉತ್ತಪ್ಪರನ್ನು 3 ಕೋಟಿ ರೂಗೆ ರಾಜಸ್ಥಾನ್ ರಾಯಲ್ಸ್ ತಂಡ ಖರೀದಿಸಿತ್ತು. ಆದರೆ ಕಳೆದ ಆವೃತ್ತಿಯಲ್ಲಿ ಉತ್ತಪ್ಪ ಹೇಳಿಕೊಳ್ಳುವ ಪ್ರದರ್ಶನ ತೋರಿರಲಿಲ್ಲ. ಅಲ್ಲದೆ ಆರಂಭಿಕ ಸ್ಥಾನಕ್ಕೆ ಬೆನ್ಸ್ಟೋಕ್ಸ್, ಬಟ್ಲರ್ ಸೇರಿದಂತೆ ಉತ್ತಮ ಆಟಗಾರರಿರುವುದರಿಂದ ಉತ್ತಪ್ಪರನ್ನು ಚೆನ್ನೈ ಸೂಪರ್ ಕಿಂಗ್ಸ್ಗೆ ಬಿಟ್ಟುಕೊಟ್ಟಿದೆ.
ಈ ವಿಚಾರವನ್ನು ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟರ್ ಮೂಲಕ ಖಚಿತ ಪಡಿಸಿದೆ. ರಾಬಿನ್ ಉತ್ತಪ್ಪ ನಮ್ಮ ಹೊಸ ಬ್ಯಾಟ್ಸ್ಮನ್, ಯಲ್ಲೋ ಬಳಗಕ್ಕೆ ನಿಮಗೆ ಸ್ವಾಗತ ಎಂದು ಟ್ವೀಟ್ ಮಾಡಿದೆ.
ಉತ್ತಪ್ಪ ಈ ಹಿಂದೆ, ಮುಂಬೈ ಇಂಡಿಯನ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪುಣೆ ವಾರಿಯರ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಆಡಿದ್ದರು. ಅವರು ಒಟ್ಟು 189 ಪಂದ್ಯಗಳಿಂದ 24 ಅರ್ಧಶತಕಗಳ ಸಹಿತ 129.9 ಸರಾಸರಿಯಲ್ಲಿ 4607 ರನ್ಗಳಿಸಿದ್ದಾರೆ. 2014ರ ಆವೃತ್ತಿಯಲ್ಲಿ 660 ರನ್ಗಳಿಸಿ ಆರೆಂಜ್ ಕ್ಯಾಪ್ ಪಡೆದಿದ್ದ ಅವರು, ಕೆಕೆಆರ್ 2ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿಯಲು ನೆರವಾಗಿದ್ದರು.
ಇದನ್ನು ಓದಿ:RCB ಸೇರಿದ ಆಸ್ಟ್ರೇಲಿಯಾದ ಡೇನಿಯಲ್ ಸ್ಯಾಮ್ಸ್, ಹರ್ಷಲ್ ಪಟೇಲ್