ದುಬೈ: ಉದಯೋನ್ಮುಖ ಕ್ರೀಡಾ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ಯುಎಇಯಲ್ಲಿ ತನ್ನ ಮೊದಲ ಹಾಗೂ ವಿಶ್ವದಾದ್ಯಂತ ತನ್ನ 2ನೇ ಕ್ರಿಕೆಟ್ ಅಕಾಡೆಮಿಯನ್ನು ಅಕ್ಟೋಬರ್ 12ರಂದು ಪ್ರಾರಂಭಿಸಲು ಸಜ್ಜಾಗಿದೆ.
ಮಧ್ಯಪ್ರಾಚ್ಯದಲ್ಲಿ ಫ್ರಾಂಚೈಸಿಯೊಂದರ ಮೊದಲ ಕ್ರಿಕೆಟ್ ಆಕಾಡೆಮಿ ಇದಾಗಿದೆ. ಜೊತೆಗೆ ಯುಎಇಯಲ್ಲಿ ಕ್ರಿಕೆಟ್ ಆಕಾಡೆಮಿ ಪ್ರಾರಂಭಿಸುತ್ತಿರುವ ಮೊದಲ ಐಪಿಎಲ್ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೆ ರಾಯಲ್ಸ್ ಪಾತ್ರವಾಗಲಿದೆ. ಈ ಅಕಾಡೆಮಿಯನ್ನು ಯುಎಇ ಮೂಲದ ಕ್ರೀಡಾ ಸಲಹಾ ಸಂಸ್ಥೆಯ ಸಹಭಾಗಿತ್ವದಲ್ಲಿ ರಾಯಲ್ಸ್ ನಡೆಸಲು ಸಿದ್ಧವಾಗಿದೆ.
ಈ ಆಕಾಡೆಮಿಯಲ್ಲಿ 6 ರಿಂದ 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ತರಬೇತಿ ಪಡೆಯಲು ಅವಕಾಶವಿದೆ. ವಿಶ್ವ ದರ್ಜೆಯ ತರಬೇತಿಯನ್ನು ಪಡೆಯಲು ಬಯಸುವವರು ತಂಡದ ಸೆಷನ್‌ಗಳು ಅಥವಾ ಗುಂಪು ಸೆಷನ್‌ಗಳಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎಂದು ತಿಳಿದುಬಂದಿದೆ.
ಎಲ್ಲಾ ಸೆಷನ್‌ಗಳು ಅಕಾಡೆಮಿ ನಿರ್ದೇಶಕ ಮತ್ತು ಮಾಜಿ ಜಿಂಬಾಬ್ವೆ ತಂಡದ ನಾಯಕ ಗ್ರೇಮ್ ಕ್ರೀಮರ್ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ. ಈ ಆಕಾಡೆಮಿ ಸವೆನ್ಸ್ ಸ್ಟೇಡಿಯಂ ಸೌಲಭ್ಯಗಳನ್ನು ಹೊಂದಿದ್ದು, ಇದು ಎಮಿರೇಟ್ಸ್ನ ಪ್ರಸಿದ್ಧ ಏರ್ಲೈನ್ಸ್ ರಗ್ಬಿ 7 ಆಯೋಜಿಸಲು ಜನಪ್ರಿಯವಾಗಿದೆ.
ಈ ಸ್ಥಳದಲ್ಲಿ ಮೂರು ವಿಶ್ವದರ್ಜೆಯ ಓವಲ್ಸ್, ಎರಡು ಎರಡು ಫ್ಲಡ್ಲೈಟ್, ಆರು ಫ್ಲಡ್ಲೈಟ್ ಟರ್ಫ್ ನೆಟ್ಗಳು ಮತ್ತು ಅತ್ಯುನ್ನತ ಗುಣಮಟ್ಟದ ಕೊಠಡಿಗಳು ಇರಲಿದ್ದು, ಎಲ್ಲಾ ವಯೋಮಾನದವರು ಭಾಗವಹಿಸಲು ಸೂಕ್ತವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.