ಮುಂಬೈ:ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆರಂಭಗೊಂಡಿದ್ದು, ಎಲ್ಲೆಲ್ಲಿ ಪಂದ್ಯ ನಡೆಯುತ್ತಿದೆಯೋ, ಅಲ್ಲೆಲ್ಲಾ ಮಳೆರಾಯನದ್ದೇ ಆಟ ಎನ್ನುವಂತಾಗಿದೆ.
ಇಂದು ನ್ಯೂಜಿಲ್ಯಾಂಡ್ ಹಾಗೂ ಶ್ರೀಲಂಕಾ ನಡುವಿನ ಪಂದ್ಯಕ್ಕೂ ಮೊದಲು ಮಳೆ ತೊಂದರೆ ಉಂಟುಮಾಡಿತ್ತು. ಹೀಗಾಗಿ ಮೊದಲ ದಿನ ಕೇವಲ 36 ಓವರ್ಗಳ ಆಟ ನಡೆದಿತ್ತು.

ಇನ್ನೊಂದೆಡೆ ಇಂದಿನಿಂದ ಆರಂಭವಾಗಿರುವ ಮೂರನೇ ಆ್ಯಶಸ್ ಟೆಸ್ಟ್ಗೂ ಕೂಡ ವರುಣ ಅಡ್ಡಗಾಲು ಹಾಕಿದ್ದಾನೆ. ನಿಗದಿತ ಸಮಯಕ್ಕೆ ಆರಂಭಗೊಳ್ಳಬೇಕಿದ್ದ ಪಂದ್ಯ ತಡವಾಗಿ ಆರಂಭವಾಯಿತಾದ್ರೂ ಕೇವಲ 4 ಓವರ್ಗಳಿಗೆ ಸೀಮಿತವಾಗಿತ್ತು.
ಇಂದೇ ಆ್ಯಂಟಿಗುವಾದಲ್ಲಿ ನಡೆಯಬೇಕಿದ್ದ ವಿಂಡೀಸ್ V/s ಭಾರತ ತಂಡಗಳ ನಡುವಿನ ಟೆಸ್ಟ್ ಪಂದ್ಯಕ್ಕೂ ಮಳೆ ಉಪದ್ರವ ಉಂಟುಮಾಡಿದೆ. ಆದರೆ ಶ್ರೀಲಂಕಾ ಹಾಗೂ ಇಂಗ್ಲೆಂಡ್ನಲ್ಲಿರುವಷ್ಟು ಮಳೆಯ ಪ್ರಮಾಣ ಇಲ್ಲವಾದ್ದರಿಂದ ಭಾರತೀಯರಿಗೆ ದೀರ್ಘ ಸಮಯದ ನಂತರ ಟೆಸ್ಟ್ ಕ್ರಿಕೆಟ್ ನೋಡುವ ಭಾಗ್ಯ ದೊರೆಯಲಿದೆ.
ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಪಂದ್ಯವನ್ನು ಇಂದು ಆಡಲಿದ್ದು, ಕರ್ನಾಟಕದ ಮಯಾಂಕ್ ಹಾಗು ರಾಹುಲ್ ಆಡುವ 11ರ ಬಳಗದಲ್ಲಿ ಅವಕಾಶಗಿಟ್ಟಿಸಿಕೊಳ್ಳಲಿದ್ದಾರೆ. ಇನ್ನು ರೋಹಿತ್ ಶರ್ಮಾರ ಆಯ್ಕೆ ಕುತೂಹಲ ಮೂಡಿಸಿದೆ.