ಬ್ರಿಸ್ಬೇನ್: ಗಬ್ಬಾದಲ್ಲಿ ಇಂದಿನಿಂದ ಪ್ರಾರಂಭವಾದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಫಲಿತಾಂಶವನ್ನು ನಿರ್ಧರಿಸುವಲ್ಲಿ ಮಳೆ ನಿರ್ಣಾಯಕ ಪಾತ್ರ ವಹಿಸುತ್ತದೆ.
ಶುಕ್ರವಾರದ ಮೊದಲ ದಿನವು ಪ್ರಕಾಶಮಾನವಾಗಿ ಮತ್ತು ಬಿಸಿಲಿನಿಂದ ಕೂಡಿರುತ್ತದೆ ಎಂದು ನಿರೀಕ್ಷಿಸಿದ್ದರೆ, ಎರಡನೇ, ನಾಲ್ಕನೇ ಮತ್ತು ಐದನೇ ದಿನ ಮಳೆಯಾಗುವ ಮುನ್ಸೂಚನೆ ಇದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭಾರತದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ "ನೀವು ಹವಾಮಾನವನ್ನು ನೋಡುತ್ತಾ ಕ್ರಿಕೆಟ್ ಆಡಲಾಗುವುದಿಲ್ಲ. ನಮ್ಮ ಮಟ್ಟಿಗೆ ನಾವು ಸಂಪೂರ್ಣ ಆಟವನ್ನು ಎದುರುನೋಡುತ್ತಿದ್ದೇವೆ. ನಾವು ಸಾಧ್ಯವಾದಷ್ಟೂ ಅತ್ಯುತ್ತಮ ಪ್ರದರ್ಶನ ನೀಡಲಿದ್ದೇವೆ. ನಮ್ಮ ಹುಡುಗರು ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಾರೆ, ಮತ್ತೆ ಈ ಪಂದ್ಯದಲ್ಲಿ ಗೆಲುವು ಸಾಧಿಸಲು ಎದುರು ನೋಡುತ್ತಿದ್ದೇವೆ" ಎಂದು ಹೇಳಿದ್ದಾರೆ.