ಕರ್ನಾಟಕ

karnataka

By

Published : Apr 25, 2020, 7:39 PM IST

Updated : Apr 25, 2020, 9:57 PM IST

ETV Bharat / sports

ವಿಶ್ವಕಪ್​ನಲ್ಲಿ ರಾಹುಲ್ ಬಳಸಿದ್ದ ಬ್ಯಾಟ್ 2.6 ಲಕ್ಷಕ್ಕೆ ಹರಾಜು.. ಜರ್ಸಿ, ಹೆಲ್ಮೆಟ್​ನಿಂದ ಬಂದ ಹಣ ದಾನ ಮಾಡಿದ ಕನ್ನಡಿಗ

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಅವೇರ್‌ ಫೌಂಡೇಶನ್​ಗೆ ಅರ್ಥಿಕ ಸಹಾಯ ಮಾಡಲು ತಮ್ಮ ಕ್ರಿಕೆಟ್ ಜೆರ್ಸಿ, ಬ್ಯಾಟ್ ಸೇರಿದಂತೆ ಕೆಲ ವಸ್ತುಗಳನ್ನು ಹರಾಜು ಹಾಕಿದ್ದ ರಾಹುಲ್ 7 ಲಕ್ಷ ರೂ.ಗೂ ಹೆಚ್ಚು ಹಣ ಕಲೆಹಾಕಿದ್ದಾರೆ.

Rahul's 2019 WC bat sold for over Rs 2.5 lakh in auction
ಕೆಎಲ್ ರಾಹುಲ್ ಬ್ಯಾಟ್ ಹರಾಜು

ನವದೆಹಲಿ:ಕನ್ನಡಿಗ ಕೆ.ಎಲ್. ರಾಹುಲ್ 2019ರ ಏಕದಿನ ವಿಶ್ವಕಪ್‌ನಲ್ಲಿ ಬಳಸಿದ ಬ್ಯಾಟ್​ 2,64,228 ರೂಪಾಯಿಗೆ ಹರಾಜಾಗಿದೆ. ಕೊರೊನಾ ವೈರಸ್ ಭೀತಿಯ ಸಮಯದಲ್ಲಿ ದುರ್ಬಲ ಮಕ್ಕಳಿಗೆ ಸಹಾಯ ಮಾಡಲು 'ಅವೇರ್ ಫೌಂಡೇಶನ್​'ಗೆ ಈ ಹಣವನ್ನು ನೀಡಿದ್ದಾರೆ.

2019ರ ಏಕದಿನ ವಿಶ್ವಕಪ್‌ ಕ್ರಿಕೆಟ್​ ಟೂರ್ನಿಯಲ್ಲಿ ತಾವು ಬಳಸಿದ ಬ್ಯಾಟ್‌, ಪ್ಯಾಡ್‌ ಹಾಗೂ ಹೆಲ್ಮೆಟ್‌ ಸಹಿತ ಪ್ರಮುಖ ವಸ್ತುಗಳನ್ನು ಭಾರತ್ ಆರ್ಮಿ ಮೂಲಕ ರಾಹುಲ್ ಹರಾಜಿಗೆ ಇಟ್ಟಿದ್ದರು. ಇದೀಗ ಆ ವಸ್ತುಗಳು ಎಷ್ಟು ಮೊತ್ತಕ್ಕೆ ಹರಾಜಾಗಿವೆ ಎಂದು ತಿಳಿದು ಬಂದಿದೆ.

  • ಬ್ಯಾಟ್ - 2,64,228 ರೂ.
  • ಹೆಲ್ಮೆಟ್ - 1,22,677 ರೂ.
  • ಏಕದಿನ ಜರ್ಸಿ - 1,13,240 ರೂ.
  • ಟೆಸ್ಟ್ ಜರ್ಸಿ - 1,32,774 ರೂ.
  • ಟಿ-20 ಜರ್ಸಿ- 1,04,824 ರೂ.
  • ಪ್ಯಾಡ್​ಗಳು - 33,028 ರೂ.
  • ಕೈಗವಸುಗಳು - 28,782 ರೂ.
  • ಒಟ್ಟು -7,99,575 ರೂಪಾಯಿ

ನನ್ನ ಕ್ರಿಕೆಟ್ ಬ್ಯಾಟ್, ಪ್ಯಾಡ್‌ಗಳು, ಕೈಗವಸು, ಹೆಲ್ಮೆಟ್‌ ಮತ್ತು ನನ್ನ ಕೆಲವು ಜರ್ಸಿಗಳನ್ನು ನಮ್ಮ ಭಾರತ್ ಆತರ್ಮಿಗೆ ದಾನ ಮಾಡಲು ನಿರ್ಧರಿಸಿದ್ದೇನೆ. ಅವರು ಈ ವಸ್ತುಗಳನ್ನು ಹರಾಜು ಮಾಡಲು ಹೊರಟಿದ್ದಾರೆ. ಈ ಹಣವು ಹಣವು 'ಅವೇರ್ ಫೌಂಡೇಶನ್​'ಗೆ ಹೋಗಲಿದೆ. ಈ ಫೌಂಡೇಶನ್ ದುರ್ಬಲ ಮಕ್ಕಳಿಗೆ ನೆರವಾಗಲಿದೆ ಎಂದು ರಾಹುಲ್ ಹೇಳಿದ್ದಾರೆ.

ಲಾಕ್‌ಡೌನ್​ನಲ್ಲಿ ಸಮಯ ಕಳೆಯುತ್ತಿರುವ ಬಗ್ಗೆ ಮಾತನಾಡಿರುವ ರಾಹುಲ್,​ ನಾನು ಮತ್ತು ನನ್ನ ಕುಟುಂಬ ಬೆಂಗಳೂರಿನಲ್ಲಿದ್ದೇವೆ. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಮನೆಯಲ್ಲಿ ಸಮಯ ಕಳೆಯುಲು ತುಂಬಾ ಸಂತೋಷವಾಗಿದೆ. ನಾವು ತಂಡದ ಪರ ಆಡುತ್ತಿದ್ದಾಗ ನಾವೆಲ್ಲರೂ ವಿರಾಮ ಬಯಸುತ್ತಿದ್ದೆವು, ಈಗ ನಮಗೆ ದೊಡ್ಡ ವಿರಾಮ ಸಿಕ್ಕಿದೆ. ಆದರೆ, ಇಂತಾ ದೊಡ್ಡ ವಿರಾಮವನ್ನು ನಾವು ಬಯಸುವುದಿಲ್ಲ ಎಂದಿದ್ದಾರೆ.

Last Updated : Apr 25, 2020, 9:57 PM IST

ABOUT THE AUTHOR

...view details