ಕರ್ನಾಟಕ

karnataka

ETV Bharat / sports

ಕೆ ಎಲ್‌ ರಾಹುಲ್ 3 ಮಾದರಿಯಲ್ಲೂ ನನ್ನ ಫೇವ್​ರೇಟ್ : ಬ್ರಿಯಾನ್ ಲಾರಾ - ಐಪಿಎಲ್ 2020

ಟೂರ್ನಿಯಲ್ಲಿ ಸತತ 3ನೇ ಬಾರಿ 50 ಕ್ಕೂ ಹೆಚ್ಚು ರನ್​ಗಳಿಸಿದ ಮದಲ ಬ್ಯಾಟ್ಸಮನ್ ಎಂಬ ದಾಖಲೆಗೆ ಪಾತ್ರರಾಗಿದ್ದರು. ಆಡಿರುವ 9 ಪಂದ್ಯಗಳಲ್ಲಿ ರಾಹುಲ್ ಐದು ಅರ್ಧ ಶತಕ ಹಾಗೂ 1 ಶತಕ ಸಹಿತ 525 ರನ್​ಗಳಿಸಿದ್ದಾರೆ..

ಬ್ರಿಯಾನ್ ಲಾರಾ
ಬ್ರಿಯಾನ್ ಲಾರಾ

By

Published : Oct 20, 2020, 10:32 PM IST

ಮುಂಬೈ: ಕಿಂಗ್ಸ್​ ಇಲೆವೆನ್ ಪಂಜಾಬ್ ತಂಡದ ನಾಯಕ ಹಾಗೂ ಕನ್ನಡಿಗ ಕೆಎಲ್​ ರಾಹುಲ್​ ಮೂರು ಮಾದರಿಯ ಕ್ರಿಕೆಟ್​ನಲ್ಲೂ ನನ್ನ ನೆಚ್ಚಿನ ಬ್ಯಾಟ್ಸ್​ಮನ್​ ಎಂದು ವೆಸ್ಟ್​ ಇಂಡೀಸ್​ ದಿಗ್ಗಜ ಬ್ರಿಯಾನ್ ಲಾರಾ ತಿಳಿಸಿದ್ದಾರೆ.

ವಿಶ್ವ ಕ್ರಿಕೆಟ್ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಬ್ರಿಯಾನ್ ಲಾರಾ ಕಿಂಗ್ಸ್‌ ಇಲೆವೆನ್ ಪಂಜಾಬ್ ತಂಡದ ನಾಯಕ ಕೆಎಲ್ ರಾಹುಲ್​ರನ್ನು ಮುಕ್ತ ಕಂಠದಲ್ಲಿ ಹೊಗಳಿದ್ದಾರೆ. ಐಪಿಎಲ್​ನಲ್ಲಿ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದು, ಟೂರ್ನಿಯಲ್ಲಿ ಸತತ 3ನೇ ಬಾರಿ 500 ಕ್ಕೂ ಹೆಚ್ಚು ರನ್​ಗಳಿಸಿದ ಭಾರತದ ಮೊದಲ ಬ್ಯಾಟ್ಸಮನ್ ಎಂಬ ದಾಖಲೆಗೆ ಪಾತ್ರರಾಗಿದ್ದರು. ಅವರು ಆಡಿರುವ 9 ಪಂದ್ಯಗಳಲ್ಲಿ ರಾಹುಲ್ ಐದು ಅರ್ಧ ಶತಕ ಹಾಗೂ 1 ಶತಕ ಸಹಿತ 525 ರನ್​ಗಳಿಸಿದ್ದಾರೆ.

ಕೆಎಲ್​ ರಾಹುಲ್

"ಆತ(ರಾಹುಲ್) ನನ್ನ ನೆಚ್ಚಿನ ಟೆಸ್ಟ್ ಬ್ಯಾಟ್ಸ್‌ಮನ್, ನನ್ನ 50 ಓವರ್‌ ಕ್ರಿಕೆಟ್​ ಬ್ಯಾಟ್ಸ್‌ಮನ್, ಆತ ನನ್ನ ಟಿ20 ಕ್ರಿಕೆಟ್​ನ ಅಚ್ಚುಮೆ ಚ್ಚಿನ ಬ್ಯಾಟ್ಸ್‌ಮನ್" ಎಂದು ಸ್ಟಾರ್‌ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಲಾರಾ, ಕೆಎಲ್ ರಾಹುಲ್ ಕುರಿತು ತಮ್ಮ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ನಾಯಕನಾಗಿ ರಾಹುಲ್ ಅದ್ಭುತವಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಅವರು ಬ್ಯಾಟಿಂಗ್ ಮಾಡುವ ರೀತಿ ಹಾಗೂ ತಂಡವನ್ನು ಜೊತೆಯಾಗಿ ಮುನ್ನಡೆಸುವ ರೀತಿ ತುಂಬಾ ಇಷ್ಟವಾಗುತ್ತದೆ. ಹೌದು, ಆರಂಭದಲ್ಲಿ ಪಂದ್ಯವನ್ನು ಫಿನಿಷ್ ಮಾಡಲು ವಿಫಲನಾಗಿರುತ್ತಿದ್ದರು. ಆದರೆ, ಈಗ ಅದರಲ್ಲೂ ಸುಧಾರಣೆ ಕಾಣುತ್ತಿದೆ" ಎಂದು ತಿಳಿಸಿದ್ದಾರೆ.

ABOUT THE AUTHOR

...view details