ಕರ್ನಾಟಕ

karnataka

ETV Bharat / sports

ಕನ್ನಡಿಗ ರಾಹುಲ್ ಅಬ್ಬರದ ಬ್ಯಾಟಿಂಗ್​​: ರಾಯಲ್ಸ್​ಗೆ 222 ರನ್​ಗಳ ಬೃಹತ್ ಗುರಿ ನೀಡಿದ ಪಂಜಾಬ್​ ಕಿಂಗ್ಸ್​​

ನಾಯಕ ಕೆಎಲ್ ರಾಹುಲ್ (91), ದೀಪಕ್​ ಹೂಡಾ(64) ಮತ್ತು ಕ್ರಿಸ್​ ಗೇಲ್​ ಅವರ 40 ರನ್​ಗಳ ನೆರವಿನಿಂದ ಪಂಜಾಬ್ ಕಿಂಗ್ಸ್​ ತಂಡ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 221ರನ್​ಗಳಿಸಿದೆ.

ಪಂಜಾಬ್ ಕಿಂಗ್ಸ್​ vs ರಾಜಸ್ಥಾನ್ ರಾಯಲ್ಸ್​
ಪಂಜಾಬ್ ಕಿಂಗ್ಸ್​ vs ರಾಜಸ್ಥಾನ್ ರಾಯಲ್ಸ್​

By

Published : Apr 12, 2021, 9:31 PM IST

Updated : Apr 12, 2021, 9:49 PM IST

ಮುಂಬೈ:ವಾಂಖೆಡೆಯಲ್ಲಿ ಬೌಂಡರಿ ಸಿಕ್ಸರ್​ಗಳ ಸುರಿಮಳೆ ಸುರಿಸಿದ ಪಂಜಾಬ್​ ಕಿಂಗ್ಸ್ ತಂಡ ರಾಜಸ್ಥಾನ್ ರಾಯಲ್ಸ್​ಗೆ 222 ರನ್​ಗಳ ಬೃಹತ್ ಮೊತ್ತದ ಗುರಿ ನೀಡಿದೆ.

ಟಾಸ್​ ಸೋತು ಬ್ಯಾಟಿಂಗ್ ಇಳಿದ ಪಂಜಾಬ್ ಕಿಂಗ್ಸ್​ ಆರಂಭದಲ್ಲೇ ವಿಕೆಟ್​ ಮಯಾಂಕ್ ಅಗರ್​ವಾಲ್(14) ವಿಕೆಟ್​ ಕಳೆದುಕೊಂಡಿತು. ಆದರೆ, ನಂತರ ಬಂದ ಯುನಿವರ್ಸಲ್ ಬಾಸ್​ ಕ್ರಿಸ್​ಗೇಲ್ ನಾಯಕ ರಾಹುಲ್ ಜೊತೆಗೂಡಿ 2ನೇ ವಿಕೆಟ್​ಗೆ 67 ರನ್​ಗಳ ಜೊತೆಯಾಟ ನೀಡಿದರು. ಗೇಲ್ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್​ಗಳ ನೆರವಿನಿಂದ 40 ರನ್​ಗಳಿಸಿ ಯುವ ಆಲ್​ರೌಂಡರ್​ ರಿಯಾನ್ ಪರಾಗ್​ಗೆ ವಿಕೆಟ್​ ಒಪ್ಪಿಸಿದರು.

ಗೇಲ್ ನಂತರ 4ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ದೀಪಕ್​ ಹೂಡ ರಾಯಲ್ಸ್​ ಬೌಲರ್​ಗಳ ದಾಳಿಯನ್ನು ಪುಡಿಗಟ್ಟಿದರು. ಅವರು ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಒಟ್ಟಾರೆ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 6 ಸಿಕ್ಸರ್​ಗಳ ನೆರವಿನಿಂದ 64 ರನ್​ ಸಿಡಿಸಿ ಕ್ರಿಸ್ ಮೋರಿಸ್​ಗೆ ವಿಕೆಟ್​ ಒಪ್ಪಿಸಿದರು. ಔಟಾಗುವ ಮುನ್ನ ನಾಯಕ ರಾಹುಲ್ ಜೊತೆಗೂಡಿ 3ನೇ ವಿಕೆಟ್​ ಜೊತೆಯಾಟದಲ್ಲಿ ಕೇವಲ 46 ಎಸೆತಗಳಲ್ಲಿ 105 ರನ್​ಗಳ ಕಾಣಿಕೆ ನೀಡಿ ತಂಡದ ಮೊತ್ತವನ್ನು ಹೆಚ್ಚಿಸಿದರು.

ಕೊನೆಯಲ್ಲಿ ಅಬ್ಬರಿಸಿದ ರಾಹುಲ್ 50 ಎಸೆತಗಳಲ್ಲಿ 7 ಬೌಂಡರಿ ಮತ್ತು 5 ಸಿಕ್ಸರ್​ಗಳ ಸಹಿತ 91 ರನ್​ ಸಿಡಿಸಿ ಯುವ ಬೌಲರ್ ಚೇತನ್ ಸಕಾರಿಯಾಗೆ ವಿಕೆಟ್​ ಒಪ್ಪಿಸಿ ಕೇವಲ 9 ರನ್​ಗಳಿಂದ ಶತಕವಂಚಿತರಾದರು. ಉಳಿದಂತೆ ಪೂರನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರೆ, ಶಾರುಖ್ 6ರನ್​ಗಳಿಸಿದರು.

ಪಂಜಾಬ್​ ಅಬ್ಬರದ ನಡುವೆ ಮಿಂಚಿದ 23 ವರ್ಷದ ಚೇತನ್ ಸಕಾರಿಯಾ 31 ರನ್​ ನೀಡಿ 3 ವಿಕೆಟ್ ಪಡೆದರು. ಮೋರಿಸ್ 41 ರನ್​ ನೀಡಿ 2 ವಿಕೆಟ್ ಪಡೆದರೆ, ಪಾರ್ಟ್ ಟೈಮ್ ಬೌಲರ್ ಪರಾಗ್ ಒಂದು ವಿಕೆಟ್ ಪಡೆದರು. ​

Last Updated : Apr 12, 2021, 9:49 PM IST

ABOUT THE AUTHOR

...view details