ಮೆಲ್ಬೋರ್ನ್ :ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ವಾ, ತಮ್ಮ ಆಟದ ದಿನಗಳಲ್ಲಿ ಲೆಜೆಂಡರಿ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಭಾರತ ತಂಡಕ್ಕೆ ಸಚಿನ್ಗಿದ್ದಷ್ಟೇ ಪ್ರಾಮುಖ್ಯತೆ ಇದೆ. ಅವರಿಬ್ಬರು ಭಾರತೀಯ ಬ್ಯಾಟಿಂಗ್ ವಿಭಾಗದ ಹೃದಯ ಭಾಗವಾಗಿದ್ದರು ಎಂದು ನೆನಪಿಸಿಕೊಂಡಿದ್ದಾರೆ.
ಭಾರತದ ಮಾಜಿ 3ನೇ ಕ್ರಮಾಂಕದ ಬ್ಯಾಟ್ಸ್ಮನ್ ರಾಹುಲ್ ದ್ರಾವಿಡ್ ಅವರನ್ನು ಶ್ಲಾಘಿಸಿರುವ ಸ್ಟೀವ್ ವಾ, ಅವರು ಅದ್ಭುತ ಏಕಾಗ್ರತೆ ಮತ್ತು ರಕ್ಷಣಾತ್ಮಕ ಆಟವನ್ನು ಹೊಂದಿದ್ದರು. ಅವರನ್ನು ಸ್ಲೆಡ್ಜ್ ಮಾಡಲು ಪ್ರಯತ್ನಿಸುವುದರಲ್ಲಿ ಅರ್ಥವಿರಲಿಲ್ಲ ಎಂದಿದ್ದಾರೆ.
ಅವರು ನಂಬಲಸಾಧ್ಯವಾದ ಉಗ್ರ ಏಕಾಗ್ರತೆಯಿಂದ ಕೂಡಿರುತ್ತಿದ್ದರು. ಅವರನ್ನು ಸ್ಲೆಡ್ಜ್ ಮಾಡುವುದರಲ್ಲಿ ಯಾವುದೇ ಅರ್ಥವಿರಲಿಲ್ಲ. ಹಾಗೂ ಅದು ಸಾಧ್ಯವೂ ಇರಲಿಲ್ಲ. ಅವರು ಭಾರತ ತಂಡದ ಬ್ಯಾಂಕರ್ ಮತ್ತು ಎಲ್ಲರನ್ನು ಒಟ್ಟಿಗೆ ಹಿಡಿದಿರುವ ಅಂಟಿನಂತಿದ್ದರು. ಅವರು ಕ್ರೀಸ್ನ ಆಕ್ರಮಿಸಿಕೊಳ್ಳುತ್ತಾರೆಂಬುದು ರನ್ಗಳಿಸಲಿದ್ದಾರೆ ಎಂದು ನನಗೆ ತಿಳಿದಿತ್ತು.
ಜೊತೆಗೆ ಅತ್ಯುತ್ತಮ ಗುಣಮಟ್ಟದ ಬೌಲಿಂಗ್ ಗುಣಮಟ್ಟವನ್ನು ಹಿಮ್ಮೆಟ್ಟಿಸುವ ಮೌಲ್ಯಯುತ ಬ್ಯಾಟ್ಸ್ಮನ್ ಆಗಿದ್ದರು. ಆತ ಎಲ್ಲರಿಗಿಂತ ಅತ್ಯುತ್ತಮ ಹೊಡೆತಗಳನ್ನು ಆಡಬಲ್ಲ ಆಟಗಾರನಾಗಿದ್ದರು. ಅವರೊಬ್ಬರ ವಿಶ್ವದರ್ಜೆಯ ಬ್ಯಾಟ್ಸ್ಮನ್ ಆಗಿದ್ದು, ಸಚಿನ್ ವಿರುದ್ಧ ಜಯಿಸಲು ಬೌಲರ್ಗಳಿಗೆ ಎಷ್ಟು ಕಷ್ಟವೋ ಅಷ್ಟೇ ಕಷ್ಟವಾಗಿತ್ತು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಕೋಲ್ಕತಾದಲ್ಲಿ 2001ರಲ್ಲಿ ರಾಹುಲ್ ದ್ರಾವಿಡ್ ಲಕ್ಷ್ಮಣ್ ಜೊತೆ ಸೇರಿ ಕಟ್ಟಿದ ಇನ್ನಿಂಗ್ಸ್ ಅದ್ಭುತವಾದದ್ದು ಎಂದು ವಾ ಹೇಳಿದ್ದಾರೆ. ಆ ಪಂದ್ಯದಲ್ಲಿ ಲಕ್ಷ್ಮಣ್ ಮತ್ತು ದ್ರಾವಿಡ್ 376 ರನ್ಗಳ ಜೊತೆಯಾಟ ನಡೆಸಿದ್ದರು. ಇದರಲ್ಲಿ ದ್ರಾವಿಡ್ 180 ರನ್ಗಳಿಸಿದ್ದರು. ಲಕ್ಷ್ಮಣ್ 181 ರನ್ಗಳಿಸಿದ್ದರು. ಈ ಪಂದ್ಯ ಕ್ರಿಕೆಟ್ ಚರಿತ್ರಯಲ್ಲೇ ಅತ್ಯದ್ಭುತ ಪಂದ್ಯಗಳಲ್ಲಿ ಇಂದಿಗೂ ಒಂದಾಗಿದೆ.
ಇದನ್ನು ಓದಿ:ಬ್ರಿಸ್ಬೇನ್ಗೆ ತೆರಳಲು ಭಾರತ ತಂಡ ಹಿಂದೇಟು ಹಾಕುತ್ತಿದೆ ಎಂಬುದು ಸುಳ್ಳು: ಸಿಎ ಬಾಸ್ ನಿಕ್ ಹಾಕ್ಲೆ