ಕರ್ನಾಟಕ

karnataka

ETV Bharat / sports

ರಾಹುಲ್​ ಸ್ಫೋಟಕ ಶತಕಕ್ಕೆ ಬೆದರಿದ ಕೇರಳ... ಅಂಕಪಟ್ಟಿಯಲ್ಲಿ ಮನೀಷ್​ ಪಡೆ ನಂಬರ್​ 1

ವಿಜಯ್​ ಹಜಾರೆ ಟ್ರೋಫಿಯ ಮೂರನೇ ಪಂದ್ಯದಲ್ಲಿ ಕರ್ನಾಟಕ ತಂಡ ಕೇರಳ ವಿರುದ್ಧ 60 ರನ್​ಗಳ ಜಯ ಕಾಣುವ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

Karnataka win against Keral

By

Published : Sep 28, 2019, 6:05 PM IST

ಬೆಂಗಳೂರು: ಕೆಎಲ್​ ರಾಹುಲ್​ ಶತಕ ಹಾಗೂ ಬೌಲರ್​ಗಳ ಅದ್ಭುತ ಪ್ರದರ್ಶನದ ನೆರವಿನಿಂದ ವಿಜಯ್​ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡ ಕೇರಳ ತಂಡವನ್ನು 60 ರನ್​ಗಳಿಂದ ಮಣಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಮುಂದುವರಿದಿದೆ.

ಮೊದಲು ಬ್ಯಾಟಿಂಗ್​ ನಡೆಸಿದ ಕರ್ನಾಟಕ ತಂಡ 49.5 ಓವರ್​ಗಳಲ್ಲಿ 294 ರನ್​ಗಳಿಗೆ ಆಲೌಟ್ ಆಯಿತು. ರಾಷ್ಟ್ರೀಯ ತಂಡದಿಂದ ಹೊರಬಿದ್ದಿರುವ ಬೇಸರದಲ್ಲಿದ್ದ ರಾಹುಲ್​ ಕೇರಳ ಬೌಲರ್​ಗಳನ್ನು ಬೆಂಡೆತ್ತಿದ್ದರು. 108 ಎಸೆತಗಳಲ್ಲಿ ಶತಕ ಪೂರೈಸಿದ ಅವರು 122 ಎಸೆತಗಳಲ್ಲಿ 4 ಸಿಕ್ಸರ್​ ಹಾಗೂ 10 ಬೌಂಡರಿ ನೆರವಿನಿಂದ 131 ರನ್​ಗಳಿಸಿದರು. ರಾಹುಲ್​ಗೆ ಸಾಥ್​ ನೀಡಿದ ಮನೀಷ್​ ಪಾಂಡೆ -50 ಗೋಪಾಲ್​ -31 ರನ್​ಗಳಿಸಿದರು.

ಕೇರಳ ಪರ ಸಂದೀಪ್​ ವಾರಿಯರ್​ 2, ಬಾಸಿಲ್​ ತಂಪಿ 3, ಕೆಎಂ ಆಸಿಫ್​ 3,ವಿನೂಪ್ ಮನೋಹರನ್​ 2 ವಿಕೆಟ್​ ಪಡೆದು ಮಿಂಚಿದರು.

295 ರನ್​ಗಳ ಟಾರ್ಗೆಟ್​ ಪಡೆದ ಕೇರಳ ಆರಂಭಿಕ ವಿಷ್ಣು ವಿನೋದ್​ (104), ಸಂಜು ಸಾಮ್ಸನ್​(67) ಅವರ ಉತ್ತಮ ಆಟದ ಹೊರೆತಾಗಿಯೂ 46.4 ಓವರ್​ಗಳಲ್ಲಿ 234 ರನ್​ಗಳಿಗೆ ಆಲೌಟ್​ ಆಗುವ ಮೂಲಕ 60 ರನ್​ಗಳಿಂದ ಸೋಲನುಭವಿಸಿತು.

ಉತ್ತಮ ಬೌಲಿಂಗ್​ ಪ್ರದರ್ಶನ ತೋರಿದ ಕರ್ನಾಟಕ ಬೌಲರ್ಸ್​ಗಳಾದ ಅಭಿಮನ್ಯು ಮಿಥುನ್​ 2, ಪ್ರಸಿಧ್​ ಕೃಷ್ಣ 1, ರೋನಿತ್​ ಮೋರೆ 3, ಶ್ರೇಯಸ್​ ಗೋಪಾಲ್ ಹಾಗೂ ಪವನ್​ ದೇಶಪಾಂಡೆ ತಲಾ​ 1 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ABOUT THE AUTHOR

...view details