ದುಬೈ: ಅಸಾಧಾರಣ ಬೌಲಿಂಗ್ ಹಾಗೂ ಬ್ಯಾಟಿಂಗ್ ಪ್ರದರ್ಶನದ ಮೂಲಕ ಡೆಲ್ಲಿ ಕ್ಯಾಪಿಟಲ್ ವಿರುದ್ಧ 88 ರನ್ಗಳ ಬೃಹತ್ ಜಯ ಸಾಧಿಸಿದ ಸನ್ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ರೇಸ್ಗೆ ಮರಳಿದೆ.
ಸನ್ರೈಸರ್ಸ್ ಹೈದರಾಬಾದ್ ನೀಡಿದ್ದ 220 ರನ್ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ಗಳಲ್ಲಿ 131 ರನ್ಗಳಿಗೆ ಸರ್ವಪತನ ಕಾಣುವ ಮೂಲಕ 88 ರನ್ಗಳ ಅಂತರದ ಸೋಲು ಕಂಡಿದ್ದಲ್ಲದೆ ಅಂಕಪಟ್ಟಿಯಲ್ಲೂ ಎರಡನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಕುಸಿದಿದೆ. ಇತ್ತ ಸನ್ರೈಸರ್ಸ್ ಹೈದರಾಬಾದ್ ಉತ್ತಮ ರನ್ರೇಟ್ ಪಡೆದರೂ 6ನೇ ಸ್ಥಾನದಲ್ಲೇ ಮುಂದುವರಿದಿದೆ.
220 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಡೆಲ್ಲಿ ತಂಡ ಮೊದಲ ಓವರ್ನಲ್ಲೇ ಶಿಖರ್ ಧವನ್(0) ವಿಕೆಟ್ ಕಳೆದುಕೊಂಡಿತು. ನಂತರ 3ನೇ ಕ್ರಮಾಂಕದಲ್ಲಿ ಬಡ್ತಿ ಪಡೆದು ಬಂದಿದ್ದ ಮಾರ್ಕಸ್ ಸ್ಟೊಯ್ನಿಸ್, ನದೀಮ್ ಬೌಲಿಂಗ್ನಲ್ಲಿ ಕ್ಯಾಚ್ ಔಟ್ ಆದರು. ನಂತರ ರಹಾನೆ(26) ಹಾಗೂ ಹೆಟ್ಮೈರ್(16) ರನ್ನ ರಶೀದ್ ಖಾನ್ ಪೆವಿಲಿಯನ್ಗಟ್ಟಿದರು.