ಕರ್ನಾಟಕ

karnataka

ETV Bharat / sports

ಫಸ್ಟ್​ ಟೆಸ್ಟ್​​ನಿಂದ ಅಶ್ವಿನ್​ ಕೈಬಿಟ್ಟ ವಿಚಾರ, ಉಪನಾಯಕ ರಹಾನೆ ಚಾಣಾಕ್ಷತನದ ಉತ್ತರ!

ವೆಸ್ಟ್​​​ ಇಂಡೀಸ್​ ವಿರುದ್ಧ ಆರಂಭಗೊಂಡಿರುವ ಮೊದಲ ಟೆಸ್ಟ್​​ ಪಂದ್ಯದಿಂದ ಆಲ್​ರೌಂಡರ್​ ಆರ್​. ಅಶ್ವಿನ್​​ಗೆ ಕೈಬಿಡಲಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ತಂಡದ ಉಪನಾಯಕ ರಹಾನೆ ಮಾತನಾಡಿದ್ದಾರೆ.

ಅಜಿಂಕ್ಯ ರಹಾನೆ/Rahane

By

Published : Aug 23, 2019, 4:57 PM IST

ಆ್ಯಂಟಿಗುವಾ:ಆತಿಥೇಯ ವೆಸ್ಟ್​​ ಇಂಡೀಸ್​ ವಿರುದ್ಧದ ಆರಂಭಗೊಂಡಿರುವ ಮೊದಲ ಟೆಸ್ಟ್​​ ಪಂದ್ಯದಲ್ಲಿ ಆಲ್​ರೌಂಡರ್​ ಹಾಗೂ ಟೆಸ್ಟ್​​​ನಲ್ಲಿ ಟೀಂ ಇಂಡಿಯಾ ಪರ ಅತಿ ಹೆಚ್ಚು(ಸದ್ಯದ ತಂಡ) ವಿಕೆಟ್​​ ಪಡೆದುಕೊಂಡಿರುವ ಪ್ಲೇಯರ್​ ಆರ್​​.ಅಶ್ವಿನ್​ ತಂಡದಿಂದ ಕೈಬಿಟ್ಟಿರುವ ವಿಚಾರ ಅತಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಇದೇ ವಿಷಯವನ್ನಿಟ್ಟುಕೊಂಡು ಅನೇಕರು ಕ್ಯಾಪ್ಟನ್​ ಕೊಹ್ಲಿ ಹಾಗೂ ಕೋಚ್​ ಶಾಸ್ತ್ರಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರವೀಂದ್ರ ಜಡೇಜಾ

ಇದೀಗ ಟೀಂ ಇಂಡಿಯಾ ಟೆಸ್ಟ್​ ತಂಡದ ಉಪನಾಯಕ ಅಜಿಂಕ್ಯ ರಹಾನೆ ಇದೇ ವಿಷಯವಾಗಿ ಮಾತನಾಡಿದ್ದಾರೆ. ತಂಡ ಅಶ್ವಿನ್​ರಂತಹ ಪ್ಲೇಯರ್​​​ ಆಡುವ 11ರ ಬಳಗದಿಂದ ಕೈಬಿಟ್ಟಾಗ ನಿಜಕ್ಕೂ ಕಷ್ಟವಾಗುತ್ತದೆ. ಆದರೆ ನಾವು ಮೈದಾನಕ್ಕಿಳಿದಾಗ ತಂಡದ ಮ್ಯಾನೇಜ್​ಮೆಂಟ್​​ ಉತ್ತಮ ಕಾಂಬಿನೇಷನ್​​ಗಾಗಿ ಮಣೆ ಹಾಕುತ್ತದೆ. ಆರನೇ ಕ್ರಮಾಂಕದಲ್ಲಿ ಬ್ಯಾಟ್ಸಮನ್​ ಯಾರು ಎಂದು ನೋಡಿದಾಗ ಜಡೇಜಾ ಆಯ್ಕೆ ಉತ್ತಮ ಎಂದು ಭಾವಿಸಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದ್ದಾರೆ.

ಅಜಿಂಕ್ಯ ರಹಾನೆ

ಈ ಟ್ರ್ಯಾಕ್​​ನಲ್ಲಿ ಹನುಮ ವಿಹಾರಿ ಕೂಡ ಬೌಲ್​ ಮಾಡಬಹುದು. ಹೀಗಾಗಿ ಕ್ಯಾಪ್ಟನ್​​ ಮತ್ತು ಕೋಚ್​ ಸೇರಿ ಈ ನಿರ್ಧಾರ ಕೈಗೊಂಡರು ಎಂದು ತಿಳಿಸಿದ್ದಾರೆ. ವೆಸ್ಟ್​​ ಇಂಡೀಸ್​ ವಿರುದ್ಧ ಅದ್ಭುತ ಪ್ರದರ್ಶನ ನೀಡಿರುವ ಅಶ್ವಿನ್​ 11 ಟೆಸ್ಟ್​​ ಪಂದ್ಯಗಳಿಂದ 60 ವಿಕೆಟ್​ ಕಬಳಿಸಿದ್ದು, 552 ರನ್ ಮಾಡಿದ್ದಾರೆ. ಆದರೆ ನಿನ್ನೆಯಿಂದ ಆರಂಭಗೊಂಡಿರುವ ಟೆಸ್ಟ್​​ ಪಂದ್ಯದಿಂದ ಅವರನ್ನು ಕೈಬಿಟ್ಟಿದ್ದು ಕೆಲ ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಆರ್​​.ಅಶ್ವಿನ್​​

ವೆಸ್ಟ್​ ಇಂಡೀಸ್​ ವಿರುದ್ಧ ಆರಂಭಗೊಂಡಿರುವ ಮೊದಲ ಟೆಸ್ಟ್​​ ಪಂದ್ಯದ ಮೊದಲ ದಿನದಂತ್ಯಕ್ಕೆ ಟೀಂ ಇಂಡಿಯಾ 6 ವಿಕೆಟ್​ ​ನಷ್ಟಕ್ಕೆ 203 ರನ್​ ಗಳಿಸಿದೆ. ಅದ್ಭುತವಾಗಿ ಬ್ಯಾಟ್​ ಬೀಸಿದ ರಹಾನೆ 81 ರನ್ ​ಗಳಿಸಿ ವಿಕೆಟ್​​ ಒಪ್ಪಿಸಿದ್ದಾರೆ.

ABOUT THE AUTHOR

...view details