ಮೆಲ್ಬೋರ್ನ್:ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತ ತಂಡದ ಹಂಗಾಮಿ ನಾಯಕನಾಗಿರುವ ಅಜಿಂಕ್ಯ ರಹಾನೆ ಡ್ರೆಸ್ಸಿಂಗ್ ರೂಮ್ನಲ್ಲಿ ಶಾಂತಿಯ ವಾತಾವರಣ ತಂದಿದ್ದಾರೆ ಎಂದು ಸ್ಪಿನ್ನರ್ ಆರ್.ಅಶ್ವಿನ್ ಹೇಳಿದ್ದಾರೆ. ಬಾಕ್ಸಿಂಗ್ ಡೇ ಟೆಸ್ಟ್ ವಿಜಯದ ನಂತರ ಅವರು ಈ ಹೇಳಿಕೆ ನೀಡಿದ್ದಾರೆ.
ಪಿಂಕ್ ಬಾಲ್ ಪಂದ್ಯದಲ್ಲಿ ದಾಖಲೆಯ 36 ರನ್ಗಳಿಗೆ ಕುಸಿದಿದ್ದ ಭಾರತ ತಂಡ 8 ವಿಕೆಟ್ಗಳ ಸೋಲು ಕಂಡಿತ್ತು. ನಂತರ ನಾಯಕ ಕೊಹ್ಲಿ ಅನುಪಸ್ಥಿತಿಯಲ್ಲಿ ರಹಾನೆ ನಾಯಕತ್ವದಲ್ಲಿ ಅಚ್ಚರಿಯ ಪ್ರದರ್ಶನ ತೋರಿ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿದೆ.
"ಕೇವಲ 36 ರನ್ಗಳಿಗೆ ಆಲೌಟ್ ಆದ ನಂತರ ಮುಂದುವರಿಯುವುದು ಅಷ್ಟು ಸುಲಭವಲ್ಲ. ಆದರೆ ಸಂಪೂರ್ಣ ಕ್ರಿಕೆಟ್ ಆಡುವ ದೇಶ ಮತ್ತು ವಿರಾಟ್ ಅನುಪಸ್ಥಿತಿಲ್ಲಿ ಹಿನ್ನಡೆ ಅನುಭವಿಸಿದ್ದೆವು. ಆದರೆ ನಾವು ತಿರುಗಿ ಬೀಳುವ ಆಲೋಚನೆಗೆ ಅಂಟಿಕೊಂಡಿದ್ದೆವು. ಜಿಂಕ್ಸ್(ರಹಾನೆ) ಅವರ ಶಾಂತತೆ ಡ್ರೆಸ್ಸಿಂಗ್ ರೂಮ್ನಲ್ಲಿ ಮೈದಾನಕ್ಕೆ ಹೋಗಿ ಪಂದ್ಯದಲ್ಲಿ ನಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವ ಸ್ಥಿರತೆಯನ್ನು ಒದಗಿಸಿಕೊಟ್ಟಿತು" ಎಂದು ಅಶ್ವಿನ್ ರಹಾನೆಯ ನಾಯತಕತ್ವವನ್ನು ಶ್ಲಾಘಿಸಿದ್ದಾರೆ.