ಶಾರ್ಜಾ: ರಾಧ ಯಾದವ್ ಅವರು 5 ವಿಕೆಟ್ ಗೊಂಚಲಿನ ನೆರವಿನಿಂದ ಹಾಲಿ ಚಾಂಪಿಯನ್ಸ್ ಸೂಪರ್ ನೋವಾಸ್ ವುಮೆನ್ಸ್ ಟಿ20 ಚಾಲೆಂಜ್ನಲ್ಲಿ ಟ್ರೈಲ್ ಬ್ಲೇಜರ್ಸ್ ತಂಡವನ್ನು ಕೇವಲ 118 ರನ್ಗಳಿಗೆ ನಿಯಂತ್ರಿಸಿದೆ.
ಟಾಸ್ ಸೋತರು ಬ್ಯಾಟಿಂಗ್ ನಡೆಸಿದ ಸ್ಮೃತಿ ಮಂಧಾನ ಹಾಗೂ ದೊಟ್ಟಿನ್ ಮೊದಲ ವಿಕೆಟ್ಗೆ 71 ರನ್ಗಳ ಜೊತೆಯಾಟ ನೀಡಿದರು. ಇಂದು ರನ್ಗಳಿಸಲು ಪರದಾಡಿದ ದೊಟ್ಟಿನ್ 32 ಎಸೆತಗಳಲ್ಲಿ 20 ರನ್ಗಳಿಸಿ ಔಟಾದರು. ಆದರೆ ಅಬ್ಬರದ ಬ್ಯಾಟಿಂಗ್ ಮಾಡಿದ ಮಂಧಾನ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 68 ರನ್ಗಳಿಸಿದರು.