ಕರ್ನಾಟಕ

karnataka

ETV Bharat / sports

2019ರ ವಿಶ್ವಕಪ್​ನಲ್ಲಿ ಹೆಚ್ಚು ಬೌಂಡರಿ - ಸಿಕ್ಸರ್​ ಬಿಟ್ಟುಕೊಟ್ಟಿದ್ದಾರೆ ಈ ಇಬ್ಬರು ಟಾಪ್ ಬೌಲರ್ಸ್​

2019 ವಿಶ್ವಕಪ್​ನಲ್ಲಿ 30 ಪಂದ್ಯಗಳು ನಡೆದಿದ್ದು, ದಕ್ಷಿಣ ಆಫ್ರಿಕಾದ ವೇಗಿ ಅತಿ ಹೆಚ್ಚು ಬೌಂಡರಿ ಹಾಗೂ ಅಫ್ಘಾನಿಸ್ತಾನದ ಸ್ಪಿನ್ನರ್​ ರಶೀದ್​ ಖಾನ್​ ಅತಿ ಹೆಚ್ಚು ಸಿಕ್ಸರ್​ ನೀಡಿರುವ ಬೌಲರ್​ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

Rabada, rasheed

By

Published : Jun 24, 2019, 4:51 PM IST

Updated : Jun 24, 2019, 5:08 PM IST


ನವದೆಹಲಿ: 2019 ವಿಶ್ವಕಪ್​ನಲ್ಲಿ 30 ಪಂದ್ಯಗಳು ನಡೆದಿದ್ದು ದಕ್ಷಿಣ ಆಫ್ರಿಕಾದ ವೇಗಿ ಅತಿ ಹೆಚ್ಚು ಬೌಂಡರಿ ಹಾಗೂ ಅಫ್ಘಾನಿಸ್ತಾನದ ಸ್ಪಿನ್ನರ್​ ರಶೀದ್​ ಖಾನ್​ ಅತಿ ಹೆಚ್ಚು ಸಿಕ್ಸರ್​ ನೀಡಿರುವ ಬೌಲರ್​ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

ಮೇ 30 ರಿಂದ ನಡೆಯುತ್ತಿರುವ ವಿಶ್ವಕಪ್​ನಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆಯುತ್ತಿವೆ. ಬಾಂಗ್ಲಾದೇಶ ಬಲಿಷ್ಠ ತಂಡಗಳಿಗೆ ಸೋಲುಣಿಸಿ ಆಶ್ಚರ್ಯಕ್ಕೆ ಕಾರಣರಾಗಿದ್ದಾರೆ. ಶ್ರೀಲಂಕಾ ತಂಡ ವಿಶ್ವಕಪ್​ ಗೆಲ್ಲುವ ನೆಚ್ಚಿನ ತಂಡವಾದ ಇಂಗ್ಲೆಂಡ್​ ವಿರುದ್ಧ ಕಡಿಮೆ ಮೊತ್ತದ ಗುರಿ ನೀಡಿಯೂ ಗೆಲುವು ಸಾಧಿಸಿ ವಿಶ್ವಕಪ್ ​ಅನ್ನು ರೋಚಕ ಹಂತಕ್ಕೆ ಕೊಂಡೊಯ್ದಿದ್ದರು.

ಏಕದಿನ ಕ್ರಿಕೆಟ್​ನಲ್ಲಿ 5ನೇ ಶ್ರೇಯಾಂಕದಲ್ಲಿರುವ ಕಗಿಸೋ ರಬಾಡ ಬರೋಬ್ಬರಿ 34 ಬೌಂಡರಿ ಬಿಟ್ಟುಕೊಡುವ ಮೂಲಕ ಈ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಫೋರ್​ ಹೊಡೆಸಿಕೊಂಡಿರುವ ಬೌಲರ್​ ಎಂದು ಬೇಡದ ದಾಖಲೆಗೆ ತುತ್ತಾಗಿದ್ದಾರೆ.

ಬೌಲಿಂಗ್​ ಶ್ರೇಯಾಂಕದಲ್ಲಿ 3ನೇ ಸ್ಥಾನದಲ್ಲಿರುವ ರಶೀದ್​ ಖಾನ್​ ವಿಶ್ವಕಪ್​ನಲ್ಲಿ 12 ಸಿಕ್ಸರ್​ ಬಿಟ್ಟುಕೊಡುವ ಮೂಲಕ ಈ ವಿಶ್ವಕಪ್​ನಲ್ಲಿ ಅತಿ ಹೆಚ್ಚು ಸಿಕ್ಸರ್​ ಬಿಟ್ಟುಕೊಟ್ಟ ಬೌಲರ್​ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ.

Last Updated : Jun 24, 2019, 5:08 PM IST

ABOUT THE AUTHOR

...view details