ವಿಶಾಖಪಟ್ಟಣಂ:ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಪ್ರಸ್ತುತ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಾಖಲೆ ಬರೆದಿದ್ದಾರೆ.
ಇಂದಿನ ಅಟದಲ್ಲಿ ಶತಕ ಸಿಡಿಸಿ ದ. ಆಫ್ರಿಕಾದ ಕುಸಿತವನ್ನು ತಡೆದ ಆರಂಭಿಕ ಆಟಗಾರ ಡೀನ್ ಎಲ್ಗರ್ ವಿಕೆಟ್ ಪಡೆಯುವ ಮೂಲಕ ಜಡೇಜಾ ಟೆಸ್ಟ್ನಲ್ಲಿ ವೇಗವಾಗಿ 200 ವಿಕೆಟ್ ಕಿತ್ತ ಎಡಗೈ ಬೌಲರ್ ಎನ್ನುವ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಂಡರು.
ವಿಕೆಟ್ ಪಡೆದು ಸಂಭ್ರಮಿಸಿದ ರವೀಂದ್ರ ಜಡೇಜಾ
ರವೀಂದ್ರ ಜಡೇಜಾ ಕೇವಲ 44 ಟೆಸ್ಟ್ ಪಂದ್ಯದಲ್ಲಿ 200 ವಿಕೆಟ್ ಪಡೆದಿದ್ದರೆ, ಶ್ರೀಲಂಕಾದ ರಂಗನ ಹೆರಾತ್ 47 ಪಂದ್ಯದ 200 ವಿಕೆಟ್ ಕಬಳಿಸಿದ್ದಾರೆ.
ಟೆಸ್ಟ್ನಲ್ಲಿ ವೇಗವಾಗಿ 200 ವಿಕೆಟ್ ಕಿತ್ತ ಎಡಗೈ ಬೌಲರ್ಗಳು:
- ರವೀಂದ್ರ ಜಡೇಜಾ - 44 ಪಂದ್ಯ
- ರಂಗನ ಹೆರಾತ್ - 47 ಪಂದ್ಯ
- ಮಿಚೆಲ್ ಜಾನ್ಸನ್ - 49 ಪಂದ್ಯ
- ಮಿಚೆಲ್ ಸ್ಟಾರ್ಕ್ - 50 ಪಂದ್ಯ
- ಬಿ.ಎಸ್.ಬೇಡಿ/ ವಾಸಿಂ ಅಕ್ರಂ - 51 ಪಂದ್ಯ