ಕರ್ನಾಟಕ

karnataka

ETV Bharat / sports

ಬೌನ್ಸರ್​ ಎದುರಿಸಲು ಅಶ್ವಿನ್-ರಾಹುಲ್​ರಿಂದ ಹೊಸ ಪ್ರಯೋಗ!... ವಿಡಿಯೋ - ಕೆಎಲ್ ರಾಹುಲ್ ಅಭ್ಯಾಸ

ಆಸ್ಟ್ರೇಲಿಯಾದಲ್ಲಿ ಬೌನ್ಸಿ ಹಾಗೂ ವೇಗದ ಬೌಲಿಂಗ್​ಗೆ ನೆರವಾಗುವ ಪಿಚ್​ಗಳೇ ಹೆಚ್ಚಾಗಿವೆ. ಹಾಗಾಗಿ 2 ವರ್ಷಗಳ ನಂತರ ಟೆಸ್ಟ್​ ತಂಡಕ್ಕೆ ಮರಳಿರುವ ಕರ್ನಾಟಕದ ಬ್ಯಾಟ್ಸ್​ಮನ್ ತಮ್ಮ ಸ್ಥಾನವನ್ನು ಖಚಿತಗೊಳಿಸುವ ಸಲುವಾಗಿ ನೆಟ್ಸ್​ನಲ್ಲಿ ಬೌನ್ಸರ್​ಗಳನ್ನು ಎದುರಿಸುವುದಕ್ಕಾಗಿ ಹೊಸ ರೀತಿಯಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ. ಅವರಿಗೆ ಅನುಭವಿ ಸ್ಪಿನ್ನರ್​ ಅಶ್ವಿನ್ ನೆರವಾಗಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ಅಶ್ವಿನ್ -ರಾಹುಲ್ ಅಭ್ಯಾಸ
ಅಶ್ವಿನ್ -ರಾಹುಲ್ ಅಭ್ಯಾಸ

By

Published : Nov 16, 2020, 9:41 PM IST

ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಮ್ ಇಂಡಿಯಾ ಇದೇ 27ರಂದು ಆರಂಭವಾಗಲಿರುವ ಸೀಮಿತ ಓವರ್​​ಗಳ ಸರಣಿಗಾಗಿ ಕ್ವಾರಂಟೈನ್​ನಲ್ಲಿದ್ದುಕೊಂಡೇ ಅಭ್ಯಾಸ ನಡೆಸುತ್ತಿದೆ. ಈ ವೇಳೆ ಆರ್.ಅಶ್ವಿನ್ ಮತ್ತು ಕನ್ನಡಿಗ ರಾಹುಲ್ ಆಸೀಸ್​ ಬೌನ್ಸಿ ಪಿಚ್​ನಲ್ಲಿ ಬ್ಯಾಟಿಂಗ್ ಮಾಡಲು ಹೊಸ ರೀತಿಯ ಅಭ್ಯಾಸ ಮಾಡಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಬೌನ್ಸಿ ಹಾಗೂ ವೇಗದ ಬೌಲಿಂಗ್​ಗೆ ನೆರವಾಗುವ ಪಿಚ್​ಗಳೇ ಹೆಚ್ಚಾಗಿವೆ. ಹಾಗಾಗಿ 2 ವರ್ಷಗಳ ನಂತರ ಟೆಸ್ಟ್​ ತಂಡಕ್ಕೆ ಮರಳಿರುವ ಕರ್ನಾಟಕದ ಬ್ಯಾಟ್ಸ್​ಮನ್ ತಮ್ಮ ಸ್ಥಾನವನ್ನು ಖಚಿತಗೊಳಿಸುವ ಸಲುವಾಗಿ ನೆಟ್ಸ್​ನಲ್ಲಿ ಬೌನ್ಸರ್​ಗಳನ್ನು ಎದುರಿಸುವುದಕ್ಕಾಗಿ ಹೊಸ ರೀತಿಯಲ್ಲಿ ಪ್ರಾಕ್ಟೀಸ್ ಮಾಡಿದ್ದಾರೆ. ಅವರಿಗೆ ಅನುಭವಿ ಸ್ಪಿನ್ನರ್​ ಅಶ್ವಿನ್ ನೆರವಾಗಿದ್ದಾರೆ. ಈ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದೆ.

ಈ ವಿಡಿಯೋದಲ್ಲಿ 22 ಅಡಿಗಳ ಪಿಚ್​​ ಬದಲು 18 ಅಡಿಗಳ ಪಿಚ್​ನಲ್ಲಿ ನಿಂತು ಅಶ್ವಿನ್​ ರಾಕೆಟ್ ಬಳಸಿ ಚೆಂಡನ್ನು ಎದೆಯ ಮಟ್ಟಕ್ಕೆ ಹೋಗುವಂತೆ ರಾಹುಲ್​ರತ್ತ ಹೊಡೆಯುತ್ತಾರೆ. ಈ ಎಸೆತಗಳನ್ನು ರಾಹುಲ್​ ವಿವಿಧ ಬ್ಯಾಟಿಂಗ್ ಭಂಗಿಯಲ್ಲಿ ಎದುರಿಸಿದ್ದಾರೆ.

ಭಾರತದ ಪ್ರಮುಖ ಬೌಲರ್​ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್ ಶಮಿ ಕೂಡ ಪಿಂಕ್​ ಬಾಲ್​ನಲ್ಲಿ ಬೌಲಿಂಗ್ ಪ್ರಾಕ್ಟೀಸ್ ಮಾಡುತ್ತಿರುವ ವಿಡಿಯೋವನ್ನು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿಕೊಂಡಿದ್ದು, ದೇಶಕ್ಕೋಶ್ಕರ ಆಡುವುದಕ್ಕಿಂತ ಉತ್ತಮ ಭಾವನೆ ಮತ್ತೊಂದಿಲ್ಲ. ಟೀಮ್​ ಇಂಡಿಯಾ ನೆಟ್ಸ್​ನಲ್ಲಿ ಬೌಲಿಂಗ್ ಮಾಡಬೇಕೆಂಬ ನನ್ನ ಬಹುದಿನದ ಕಾಯುವಿಕೆ ಇಂದಿಗೆ ಮುಗಿದಿದೆ ಎಂದು ಬರೆದುಕೊಂಡಿದ್ದಾರೆ.

ABOUT THE AUTHOR

...view details