ಕರ್ನಾಟಕ

karnataka

ETV Bharat / sports

ಕ್ರಿಕೆಟ್​ನಲ್ಲಿ ಮಂಕಂಡ್​ ತಪ್ಪಿಸಲು ತಂತ್ರಜ್ಞಾನ ಬಳಸಿಕೊಳ್ಳಲು ಸಲಹೆ ನೀಡಿದ ಅಶ್ವಿನ್​ - controversial runout Jos Buttler in the 2019

"ಬೌಲರ್​ ಚೆಂಡನ್ನು ಎಸೆಯುವ ಮೊದಲು ಬ್ಯಾಟ್ಸ್​ಮನ್​ ಬೌಲರ್​ಗಿಂತ ಮೊದಲೇ ರನ್​ಗಳಿಸಲು ಪ್ರಯತ್ನಿಸುತ್ತಾರೆಯೇ ಎಂಬುದನ್ನು ತಂತ್ರಜ್ಞಾನ ಗಮನಿಸಿರುತ್ತದೆ. ಒಂದು ವೇಳೆ ಬೌಲರ್​ ಚೆಂಡನ್ನು ಎಸೆಯುವ ಮುನ್ನ ನಾನ್​ ಸ್ಟ್ರೈಕರ್​ ಬ್ಯಾಟ್ಸ್​ಮನ್​ ಓಡಿದರೆ ಆ ಎಸೆತದಲ್ಲಿ ಗಳಿಸಿದ ರನ್​ಗಳನ್ನು ಗಣನೆಗೆ ತೆಗೆದುಕೊಳ್ಳಬಾರದು"ಎಂದು ಅವರು ಸಲಹೆ ನೀಡಿದ್ದಾರೆ.

ಆರ್​ ಅಶ್ವಿನ್​
ಆರ್​ ಅಶ್ವಿನ್​

By

Published : Jul 28, 2020, 6:56 PM IST

ಹೈದರಾಬಾದ್​: ಕಳೆದ ಐಪಿಎಲ್​ನಲ್ಲಿ ಆರ್​ ಅಶ್ವಿನ್​ ಜೋಸ್​ ಬಟ್ಲರ್​ರನ್ನು ಮಂಕಡ್​ ರನ್​ಔಟ್​ ಮಾಡುವ ಮೂಲಕ ವಿವಾದಕ್ಕೀಡಾಗಿದ್ದರು. ಇದೀಗ ಬ್ಯಾಟ್ಸ್​ಮನ್​ಗಳು ಬೌಲರ್​ ಚೆಂಡನ್ನು ಎಸೆಯುವ ಮುನ್ನ ಓಡುವುದನ್ನು ತಡೆಯಲು ತಂತ್ರಜ್ಞಾನದ ಬಳಕೆ ಜಾರಿಗೆ ತಂದು ಆಟವನ್ನು ಸಮತೋಲನದಲ್ಲಿಡ ಬೇಕೆಂದು ಸಲಹೆ ನೀಡಿದ್ದಾರೆ.

"ಬೌಲರ್​ ಚೆಂಡನ್ನು ಎಸೆಯುವ ಮೊದಲು ಬ್ಯಾಟ್ಸ್​ಮನ್​ ಬೌಲರ್​ಗಿಂತ ಮೊದಲೇ ರನ್​ಗಳಿಸಲು ಪ್ರಯತ್ನಿಸುತ್ತಾರೆಯೇ ಎಂಬುದನ್ನು ತಂತ್ರಜ್ಞಾನ ಗಮನಿಸಿರುತ್ತದೆ. ಒಂದು ವೇಳೆ ಬೌಲರ್​ ಚೆಂಡನ್ನು ಎಸೆಯುವ ಮುನ್ನ ನಾನ್​ ಸ್ಟ್ರೈಕರ್​ ಬ್ಯಾಟ್ಸ್​ಮನ್​ ಓಡಿದರೆ ಆ ಎಸೆತದಲ್ಲಿ ಗಳಿಸಿದ ರನ್​ಗಳನ್ನು ಗಣನೆಗೆ ತೆಗೆದುಕೊಳ್ಳಬಾರದು"ಎಂದು ಅವರು ಸಲಹೆ ನೀಡಿದ್ದಾರೆ.

ಅದೇ ರೀತಿ ನಾನ್​ ಸ್ಟ್ರೈಕರ್​ ಬೌಲರ್​ಗೂ ಚೆಂಡು ಎಸೆಯುವ ಮುನ್ನ ವೇ ಕ್ರೀಸ್ ಬಿಡುವುದರಿಂದ ಬೌಲಿಂಗ್​ ತಂಡಕ್ಕೆ ಏನೆಲ್ಲಾ ಅನಾನುಕೂಲವಾಗುತ್ತದೆ ಎಂಬುದನ್ನು ಮತ್ತೊಂದು ಟ್ವೀಟ್​ ಮೂಲಕ ವಿವರಿಸಿದ್ದಾರೆ.

ಆರ್​ ಅಶ್ವಿನ್​

"ನಿಮ್ಮಲ್ಲಿ ಅನೇಕರು ಇಲ್ಲಿ ಗಂಭೀರ ಅಸಮಾನತೆಯಿದೆ ಎಂದು ನೋಡಲು ಸಾಧ್ಯವಾಗುವುದಿಲ್ಲ, ಆದ್ದರಿಂದ ನಾನು ಅತ್ಯುತ್ತಮವಾದ ರೀತಿಯಲ್ಲಿ ಸ್ಪಷ್ಟಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತೇನೆ. ನಾನ್​ ಸ್ಟ್ರೈಕರ್​ನಲ್ಲಿರುವವರು ಬ್ಯಾಟ್ಸ್​ಮನ್​ 2 ಅಡಿ ಮುಂದೆ ಹೋದರೆ 2 ರನ್​ಗಳಿಸಲು ಸುಲಭವಾಗುತ್ತದೆ. ಇದರಿಂದ ಮುಂದಿನ ಎಸೆತಕ್ಕೆ ಅದೇ ಬ್ಯಾಟ್ಸ್​ಮನ್ ಮತ್ತೆ ಸ್ಟ್ರೈಕ್​ಗೆ ಹೋಗುತ್ತಾರೆ.

ಮತ್ತೆ ಅದೇ ಬ್ಯಾಟ್ಸ್​ಮನ್​ ಸ್ಟ್ರೈಕ್​ಗೆ ಮರಳಿದಾಗ ಆತ ಮುಂದಿನ ಎಸೆತದಲ್ಲಿ 4 ಅಥವಾ 6 ರನ್​ಗಳಿಸದಬಹುದು. ಹಿಂದಿನ ಎಸೆತದಲ್ಲಿ ನಾನ್​ ಸ್ಟ್ರೈಕರ್​ ಬ್ಯಾಟ್ಸ್​ಮನ್​ ಮಾಡುವ ಆ ಪ್ರಮಾದದಿಂದ 1ರನ್​ ಜಾಗದಲ್ಲಿ ಬೌಲಿಂಗ್​ ತಂಡಕ್ಕೆ 7 ರನ್​ಗಳು ದಂಡ ತೆತ್ತಬೇಕಾಗುತ್ತದೆ. ಅಲ್ಲದೆ ಹಿಂದಿನ ಎಸೆತದಲ್ಲಿ ನ್ಯಾಯವಾಗಿ ಓಡಿ ಒಂದು ರನ್​ ತೆಗೆದುಕೊಂಡಿದ್ದಲ್ಲೆ ಬೇರೆ ಬ್ಯಾಟ್ಸ್​ಮನ್​ ಸ್ಟ್ರೈಕ್​ಗೆ ಬರವುದರಿಂದ ಮುಂದಿನ ಎಸೆತ ಡಾಟ್​ ಬಾಲ್ ಆಗುವ ಸಾಧ್ಯತೆಯೂ ಇರುತ್ತದೆ ಎಂದು ಅಶ್ವಿನ್​ ವಿವರಿಸಿದ್ದಾರೆ.

ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅಶ್ವಿನ್, ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ಜೋಸ್ ಬಟ್ಲರ್‌ನನ್ನು ಮಂಕಡ್​ ಮಾಡಿ ಕ್ರಿಕೆಟ್​ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ನಾನ್​ ಸ್ಟ್ರೈಕರ್​ನಲ್ಲಿ ಬಟ್ಲರ್ ಕ್ರೀಸ್​ ಬಿಟ್ಟು ತೆರಳುತ್ತಿದ್ದದ್ದನ್ನು ಗಮನಿಸಿದ ಅಶ್ವಿನ್ ಬೆಲ್ಸ್​ ಎಗರಿಸಿದ್ದರು. ನಂತರ ಅಂಪೈರ್​ಗಳು ಬಟ್ಲರ್​ರನ್ನು ಔಟೆಂದು ತೀರ್ಪು ನೀಡಿದ್ದರು.

ಇಂತಹ ಘಟನೆಗಳನು ಮರುಕಳಿಸಬಾರದೆಂದು ಅಶ್ವಿನ್​ ತಂತ್ರಜ್ಞಾನದ ಬಳಕೆಯ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು ಎಂದು ತಮ್ಮ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ABOUT THE AUTHOR

...view details